ಮಂಗಳೂರು| 17ರ ಬಾಲಕಿಗೆ 41ರ ಅಂಕಲ್ ಜೊತೆ ವಿವಾಹ!; ಬಾಲ್ಯವಿವಾಹ ಮಾಡಿಸಿದ ಇಡೀ ಕುಟುಂಬವೇ ಜೈಲು ಪಾಲು!

  • 18 Dec 2024 01:00:40 PM

ಮಂಗಳೂರು: ಬಾಲ್ಯವಿವಾಹ ಭಾರತೀಯ ಕಾನೂನು ಪ್ರಕಾರ ಅಪರಾಧ. ಆದರೆ ಕಾನೂನಿಗೆ ಕಿಂಚಿತ್ತೂ ಬೆಲೆ ನೀಡದ ಕುಟುಂಬವೊಂದು 41ವರ್ಷದ ಅಂಕಲ್ ಜೊತೆಗೆ 17ವರ್ಷದ ಬಾಲಕಿಯ ಮದುವೆ ಮಾಡಿಸಿ ಕಂಬಿ ಹಿಂದೆ ಕುಳಿತು ಮುದ್ದೆ ಮುರಿಯುವ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರಿನಲ್ಲಿ ನಡೆದ ಈ ಅದ್ದೂರಿ ಮದುವೆಯ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ.

 

ಘಟನೆಯ ವಿವರ?

 

ಮಂಗಳೂರಿನ ಮೊಂಟೆಪದವು ನಿವಾಸಿ ಇಮ್ತಿಯಾಜ್(41) ಎಂಬಾತನಿಗೆ ಬಂಟ್ವಾಳ ತಾಲೂಕಿನ ಅಬ್ದುಲ್ ಖಾದರ್(29) ಎಂಬಾತ ತನ್ನ 17 ವರ್ಷದ ಮಗಳನ್ನು ಕೊಟ್ಟು ಉಳ್ಳಾಲದ ಎಸ್.ಕೆ.ಮಲ್ಟಿ ಪರ್ಪಸ್ ಹಾಲ್ ನಲ್ಲಿ ಅದ್ದೂರಿಯಾಗಿ 2023ರ ಮೇ 31ರಂದು ವಿವಾಹ ಮಾಡಿಸಿದ್ದ.

 

ಬಾಲ್ಯವಿವಾಹ ಅಪರಾಧ ಎಂದು ಗೊತ್ತಿದ್ದರೂ ಕೂಡ ಈ ಮದುವೆಗೆ ಎರಡು ಕುಟುಂಬದ ಸಹಕಾರವಿತ್ತು. ಆದರೆ ಕೆಲವೇ ಸಮಯದಲ್ಲಿ ಈ ಬಾಲ್ಯವಿವಾಹದ ಗುಟ್ಟು ರಟ್ಟಾಗಿ ಪೊಲೀಸರ ಕಿವಿಗೆ ಬಿದ್ದಿದೆ. ಸದ್ಯ, ಈ ಪ್ರಕರಣ ಇತ್ಯರ್ಥಗೊಳಿಸಿರುವ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

 

ಇಡೀ ಕುಟುಂಬವೇ ಜೈಲು ಪಾಲು!

 

ಬಾಲ್ಯವಿವಾಹದ ಈ ಪ್ರಕರಣವನ್ನು ಕೈಗೆತ್ತಿಕೊಂಡ ಮಂಗಳೂರು ಮಹಿಳಾ ಪೊಲೀಸ್ ಠಾಣೆ ನಿರೀಕ್ಷಕ ರಾಜೇಂದ್ರ ಅವರು ಆರೋಪಿಗಳ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದಾರೆ.

 

ಸದ್ಯ, ಈ ಪ್ರಕರಣದ ತೀರ್ಪು‌ ನೀಡಿರುವ ಕೋರ್ಟ್ ಬಾಲಕಿಯ ಪತಿ ಮಹಮ್ಮದ್ ಇಮ್ತಿಯಾಜ್, ಬಾಲಕಿಯ ತಂದೆ ಅಬ್ದುಲ್ ಖಾದರ್, ತಾಯಿ ರಮ್ಲತ್, ಮಂಜನಾಡಿಯ ಜೆ.ಐ ಮಹಮ್ಮದ್ ಹಾಗೂ ಮೈಮುಮಾ ಅವರಿಗೆ 1 ವರ್ಷದ ಜೈಲು ಹಾಗೂ ತಲಾ 5000 ದಂಡ ವಿಧಿಸಿ ಆದೇಶ ನೀಡಿದೆ.