ಪದವಿ ಮುಗಿದಿದ್ರೂ ಕೆಲ್ಸ ಸಿಗ್ತಾ ಇಲ್ವಾ..? ಎಸ್ ಬಿಐ ಬ್ಯಾಂಕ್ ನಲ್ಲಿದೆ ಭರ್ಜರಿ ಉದ್ಯೋಗವಕಾಶ...!! ಇಂದೇ ಅರ್ಜಿ ಸಲ್ಲಿಸಿ...

  • 18 Dec 2024 08:01:09 PM

ಇತ್ತೀಚಿನ ದಿನಗಳಲ್ಲಿ ಪದವಿ ಮುಗಿದಿದ್ರೂ, ಡಬಲ್ ಡಿಗ್ರಿ ಪಡೆದಿದ್ರೂ ಕೂಡಾ ಉದ್ಯೋಗಕ್ಕಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ವಿದ್ಯಾವಂತರಾಗಿ ನಿರುದ್ಯೋಗಿಗಳಾಗಿರೋದಂತೂ ಮಾನಸಿಕ ಖಿನ್ನತೆಗೆ ದೂಡಲ್ಪಡುತ್ತದೆ.

 

ಇದೇ ಕಾರಣಕ್ಕೆ ಅದೆಷ್ಟೋ ತರುಣರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳೂ ಇವೆ. ಇದೀಗ ಉದ್ಯೋಗಕ್ಕಾಗಿ ಅಲೆದಾಡುತ್ತಿರುವಂತಹ ಪದವೀಧರರಿಗೆ ಗುಡ್ ನ್ಯೂಸ್ ಒಂದು ಕೇಳಿ ಬಂದಿದೆ. 

 

ಎಸ್ ಬಿಐನಲ್ಲಿ 13000ಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಆಹ್ವಾನ..!!

 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಬೃಹತ್ ಮಟ್ಟದಲ್ಲಿ ಉದ್ಯೋಗವಕಾಶಗಳನ್ನು ನೀಡುತ್ತಿದೆ. ಬ್ಯಾಂಕ್ ನಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣವಕಾಶ ಆಗಿದ್ದು ಸದುಪಯೋಗಪಡಿಸಿಕೊಳ್ಳಬಹುದು.

 

ಇಂದಿನಿಂದ ಆನ್ಲೈನ್ ಅರ್ಜಿ ಪ್ರಕ್ರಿಯೆಗಳು ಆರಂಭಗೊಂಡಿವೆ. ಈ ಬೃಹತ್ ಪ್ರಮಾಣದ ನೇಮಕದಲ್ಲಿ ಕರ್ನಾಟಕಕ್ಕೆ 203 ಉದ್ಯೋಗಗಳು ಮೀಸಲಿವೆ. 

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಮಾನದಂಡಗಳೇನು..? 

 

ಜ್ಯೂನಿಯರ್ ಅಸೋಸಿಯೇಟ್ ಹುದ್ದೆ ಇದಾಗಿದ್ದು ತಿಂಗಳಿಗೆ 24050ರಿಂದ 64480 ರೂಪಾಯಿ ಸ್ಯಾಲರಿಯನ್ನು ಪಡೆದುಕೊಳ್ಳಬಹುದು. 13725 ಒಟ್ಟು ಹುದ್ದೆಗಳಿದ್ದು ದೇಶದಾದ್ಯಂತ ಕೆಲಸದ ವ್ಯಾಪ್ತಿ ಇರಲಿದೆ.

 

ಲಡಾಖ್ ನಲ್ಲಿ ಕೂಡಾ 50 ಹುದ್ದೆಗಳಿವೆ. ಇನ್ನು ಮುಖ್ಯವಾದ ಮಾನದಂಡವೆಂದರೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. 7- ಜನವರಿ 2025 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ವಯಸ್ಸು 20ರಿಂದ 28 ವರ್ಷದ ಒಳಗಿನವರಾಗಿರಬೇಕು. ಅರ್ಜಿ ಶುಲ್ಕ ಜನರಲ್, ಒಬಿಸಿಯವರಿಗಾದರೆ 750 ರೂಪಾಯಿ. ಎಸ್ ಸಿ, ಎಸ್.ಟಿ, ವಿಶೇಷಚೇತನರಿಗೆ ಅರ್ಜಿ ಶುಲ್ಕವಿಲ್ಲ.

 

ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಹಂತವಾಗಿ ಪೂರ್ವಭಾವಿ ಪರೀಕ್ಷೆ, ಮುಖ್ಯ ಪರೀಕ್ಷೆ, ಭಾಷಾ ಪ್ರಾವೀಣ್ಯತೆ ಪರೀಕ್ಷೆ ಇರಲಿದೆ. ಅರ್ಜಿ ಸಲ್ಲಿಕೆ ಮಾಡಲು ಮತ್ತು ಹೆಚ್ಚಿನ ಮಾಹಿತಿಗಾಗಿ ಎಸ್ ಬಿಐನ ಅಫೀಶಿಯಲ್ ವೆಬ್ಸೈಟ್ ಗೆ ಭೇಟಿ ನೀಡಬಹುದು.