ಕೋಳಿ ಕಟ್ಟ ಆಟದ ವೇಳೆ ಯುವಕನಿಗೆ ಗಂಭೀರ ಗಾಯ!! ಸಾಮಾಜಿಕ ಜಾಲ ತಾಣಗಳಲ್ಲಿ ಫೋಟೋ ವ್ಯಾಪಕವಾಗಿ ಹರಡುತ್ತಿದೆ!!

  • 18 Dec 2024 08:04:15 PM


ಕೋಳಿ ಕುಸ್ತಿ ತುಳುನಾಡಿನ ಒಂದು ಪ್ರಸಿದ್ಧ ಗ್ರಾಮೀಣ ಕ್ರೀಡೆಯಾಗಿದೆ. ಇದು ಮುಖ್ಯವಾಗಿ ಗ್ರಾಮೀಣ ಉತ್ಸವಗಳಲ್ಲಿ ನಡೆಯುತ್ತದೆ.  ಕೋಳಿ ಕುಸ್ತಿ ಎಂಬುದು ಗ್ರಾಮೀಣ ಸಂಸ್ಕೃತಿಯ ಭಾಗವಾಗಿರುತ್ತದೆ.

ಕೋಳಿಯ ಚಲನೆ, ತಂತ್ರ, ಮತ್ತು ಶಕ್ತಿ ಅನುಕರಿಸುತ್ತಾ 2 ತಂಡದ ಆಟಗಾರರು ಪರಸ್ಪರ ಪೈಪೋಟಿ ನಡೆಸುತ್ತಾರೆ.

 

ಈ ಕ್ರೀಡೆ ಶೌರ್ಯ, ಚಾತುರ್ಯ, ಮತ್ತು ಸಮೂಹಸಹಕಾರವನ್ನು ತೋರಿಸುವ ಆಟವಾಗಿದ್ದು, ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ.

 

ಈ ಆಟದ ಸಮಯದಲ್ಲಿ ಕೋಳಿಗಳ ಕಾಲಿಗೆ ಬ್ಲೇಡ್ ಅನ್ನು ಕಟ್ಟಲಾಗುತ್ತದೆ. ಆದ್ದರಿಂದ ಬಹಳ ಶ್ರದ್ಧೆ ಮತ್ತು ಚುರುಕುತನದಿಂದ ಆಡಿಸುವ ಆಟವಾಗಿರುತ್ತದೆ.

 

ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿ ಏನೆಂದರೆ ಎಲ್ಲೊಂಡದೆ ಕೋಳಿ ಕುಸ್ತಿಯ ಸಂದರ್ಭದಲ್ಲಿ ಗಂಭೀರ ಅನಾಹುತವೊಂದು ನಡೆದಿದೆ.

 

ಈ ಆಟದ ವೇಳೆಯಲ್ಲಿ ಒಬ್ಬ ಯುವಕನಿಗೆ ಗಂಭೀರ ಗಾಯ ಉಂಟಾದ ಘಟನೆ ನಡೆದಿದೆ.

 

ಸಾಮಾಜಿಕ ಜಾಲ ತಾಣಗಳ ಗ್ರೋಪ್ ನಲ್ಲಿ ಇದರ ಫೋಟೋ ವ್ಯಾಪಕವಾಗಿ ಹರಡುತ್ತಿದೆ.

ಕೋಳಿಯ ಕಾಲಿಗೆ ಕಟ್ಟಿರುವಂತಹ ಬ್ಲೇಡ್ ಒಬ್ಬ ಯುವಕನ ಕಾಲನ್ನು ತುಂಡರಿಸಿದ ಮಟ್ಟದಲ್ಲಿ ಗಾಯವನ್ನುಂಟು ಮಾಡಿದೆ.

 

ಎಲ್ಲಿ ?? ಯಾರಿಗೆ?? ಹೇಗೆ ಈ ಅನಾಹುತ ಸಂಭವಿಸಿತು ಎನ್ನುವ ಮಾಹಿತಿ ಇನ್ನು ದೊರಕಿಲ್ಲ.

 

ಪ್ರತಿಯೊಂದು ಆಟಗಳಲ್ಲಿಯೂ ರಿಸ್ಕ್ ಇದ್ದೇ ಇರುತ್ತದೆ. ಆದ್ದರಿಂದ ಇಂತಹ ಸಮಯದಲ್ಲಿ ಮುಂಜಾಗರುಕತೆ ವಹಿಸಿ ಆಟ ಆಡಬೇಕು.
ಆಟ ಜೀವನವನ್ನು ಕಳೆಯುವಂತಾಗಬಾರದು.