ಕೋಝಿಕ್ಕೋಡ್: ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಸಾವನಪ್ಪಿದ್ದು, ಈಕೆ ಸಾವಿಗೂ ಮುನ್ನ ಬರೆದಿಟ್ಟ ಡೆತ್ನೋಟ್ ಪೊಲೀಸರೆ ಹೌಹಾರುವಂತೆ ಮಾಡಿದೆ.
ಮೃತ ಯುವತಿಯನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನ ದ್ವಿತೀಯ ವರ್ಷದ ನರ್ಸಿಂಗ್ ವಿದ್ಯಾರ್ಥಿನಿ ಲಕ್ಷ್ಮೀ ರಾಧಾಕೃಷ್ಣನ್ (20) ಎಂದು ಗುರುತಿಸಲಾಗಿದೆ. ಅಸಲಿಗೆ ಇಲ್ಲಿ ಆಗಿದ್ದೇನು?, ಆಕೆ ಬರೆದಿಟ್ಟ ಡೆತ್ನೋಟ್ ನಲ್ಲಿ ಅಂತಹದ್ದೇನಿ? ಬನ್ನಿ ನೋಡೋಣ.
ಆತ್ಮಹತ್ಯೆಯೋ? ಕೊಲೆಯೋ?
ಲಕ್ಷ್ಮೀ ದಿಢೀರ್ ಸಾವಿನ ಬಗ್ಗೆ ಮಾತನಾಡಿರುವ ಆಕೆಯ ಸಂಬಂಧಿ ಹರಿಪ್ರಸಾದ್, 'ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಳ್ಳಲು ಯಾವುದೇ ಕಾರಣಗಳಿಲ್ಲ. ಆಕೆ ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಳು. ಈ ಸಾವಿನ ಹಿಂದೆ ಇನ್ಯಾರದ್ದೋ ಕೈವಾಡವಿದೆ.
ಈ ಬಗ್ಗೆ ಕೂಲಂಕುಷವಾಗಿ ತನಿಖೆಯಾಗಬೇಕು' ಎಂದಿದ್ದಾರೆ.ಸದ್ಯ, ಯುವತಿಯ ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.
ಡೆತ್ನೋಟ್ ನಲ್ಲಿ ಏನಿದೆ?
ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಲಕ್ಷ್ಮೀ ಹಾಸ್ಟೇಲ್ ನಿಂದ ಕಾಲೇಜಿಗೆ ತೆರಳುತ್ತಿದ್ದಳು. ಆದರೆ ನಿನ್ನೆ (ಡಿ.17) ಆಕೆ ಸ್ನೇಹಿತೆಯರಿಗೆ ಅನಾರೋಗ್ಯದ ಕಾರಣ ಹೇಳಿ ರಜೆ ಮಾಡಿದ್ದಳು. ಮಧ್ಯಾಹ್ನ ಹಾಸ್ಟೆಲ್ ಸಿಬ್ಬಂದಿ ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಕೊನೆಗೆ ಬಾಗಿಲು ಒಡೆದು ನೋಡಿದಾಗ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಆಕೆ ಬರೆದ ಡೆತ್ನೋಟ್ ಸಿಕ್ಕಿದ್ದು ಅದರಲ್ಲಿ, 'ನನ್ನ ಸಾವಿಗೆ ನಾನೇ ಕಾರಣ' ಎಂದು ಬರೆದಿದ್ದಾಳೆ. ಸದ್ಯ, ಈ ಪ್ರಕರಣದ ಬಗ್ಗೆ ತನಿಖೆಯಾಗುತ್ತಿದೆ.