ಮಾಣಿಯಲ್ಲಿ ನಡೆದ ಭೀಕರ ಅಪಘಾತಕ್ಕೆ ಕೊನೆಯುಸಿರೆಳೆದ ಸುಳ್ಯದ ಯುವಕ...!! ನಿಜಕ್ಕೂ ಅಲ್ಲಿ ಆಗಿದ್ದೇನು ಗೊತ್ತಾ..?

  • 19 Dec 2024 10:48:10 AM


ಮಾಣಿ: ಇತ್ತೀಚಿನ ದಿನಗಳಲ್ಲಿ ದಿನನಿತ್ಯ ನಾವು ಅದೆಷ್ಟೋ ಅಪಘಾತ ಪ್ರಕರಣಗಳನ್ನು ನೋಡುತ್ತಿರುತ್ತೇವೆ. ರಸ್ತೆ ನಿಯಮಗಳನ್ನು ಸರಿಯಾಗಿ ಅನುಸರಿಸದೆ ಅಥವಾ ಅವಸರಕ್ಕೆ ಮಣಿದು ದುರ್ಘಟನೆಗಳು ನಡೆಯುತ್ತಿರುತ್ತದೆ.

 

ಅನೇಕ ಯುವಕರು ಇಂತಹ ದುರ್ಘಟನೆಯಲ್ಲಿ ದುರಂತ ಅಂತ್ಯವನ್ನು ಕೂಡಾ ಕಂಡಿದ್ದಾರೆ. ಇದೀಗ ಸುಳ್ಯದ ಯುವಕನೋರ್ವ ಅಪಘಾತದಲ್ಲಿ ಮೃತಪಟ್ಟಿದ್ದು ಅಪಘಾತದ ದೃಶ್ಯ ನೋಡಿದ್ರೆ ನೀವು ಶಾಕ್ ಆಗೋದು ಗ್ಯಾರಂಟಿ...!!

 

ಬೈಕ್ ಮತ್ತು ಟೆಂಪೋ ಢಿಕ್ಕಿ, ಸವಾರ ದಾರುಣ ಅಂತ್ಯ...!!

 

ಬೈಕ್ ಮತ್ತು ಟೆಂಪೋ ನಡುವೆ ಭೀಕರ ಅಪಘಾತ ಸಂಭವಿಸಿ ಸವಾರನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ರಾತ್ರಿ ಮಾಣಿ ಸಮೀಪಸ ಸೂರಿಕುಮೇರು ಜಂಕ್ಷನ್ ನಲ್ಲಿ ನಡೆದಿದೆ.

 

ಸುಳ್ಯ ನಿವಾಸಿ, ಸೂರಿಕುಮೇರು ಸಮೀಪದ ಕೋಸ್ಟಲ್ ಕೋಳಿ ಫಾರ್ಮ್ ಕೆಲಸಗಾರ ಪುನೀತ್ ಸಾವನ್ನಪ್ಪಿದ ಬೈಕ್ ಸವಾರನಾಗಿದ್ದಾನೆ. ಈತ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

 

ಅಸುನೀಗಿದ ಮಗನ ಮೃತದೇಹ ಕಂಡು ಮನೆಯವರು ಶೋಕಸಾಗರದಲ್ಲಿ ಮುಳುಗಿದ್ದಾರೆ. ಪುನೀತ್ ನ ಸಾವಿಗೆ ಆತನ ಸ್ನೇಹಿತರು, ಸಂಬಂಧಿಗಳು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ. 

 

ಘಟನೆಯಲ್ಲಿ ನಿಜಕ್ಕೂ ಆಗಿದ್ದೇನು..? 

 

ಬೈಕ್ ಸವಾರನಾಗಿದ್ದ ಪುನೀತ್ ಸೂರಿಕುಮೇರ್ ನಲ್ಲಿ ತಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಕೆಲಸ ಮುಗಿಸಿ ಸುಳ್ಯದ ತನ್ನ ಮನೆಗೆ ಹೊರಟಿದ್ದ. ಈ ಸಂದರ್ಭ ಸುಯರಿಕುಮೇರು ಜಂಕ್ಷನ್ ನಲ್ಲಿ ಬೈಕ್ ಹಾಗೂ ಟೆಂಪೋ ಮುಖಾಮುಖಿ ಢಿಕ್ಕಿ ಹೊಡೆದಿದ್ದು ಅಪಘಾತದ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.

 

ಈ ಘಟನೆ ನಡೆದ ಕೂಡಲೇ ಗಾಯಗೊಂಡ ಪವನ್ ನನ್ನು ಮಾಣಿಯ ಸೋಷಿಯಲ್ ಇಕ್ವ ಆ್ಯಂಬುಲೆನ್ಸ್ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ.‌ ಆದರೆ ದುರದೃಷ್ಟವಶಾತ್ ಆತ ರಸ್ತೆ ಮಧ್ಯೆಯೇ ಸಾವನ್ನಪ್ಪಿದ್ದಾನೆ. ಈ ದುರ್ಘಟನೆ ಕಂಡು ಸ್ಥಳೀಯರು ಕೂಡಾ ಶಾಕ್ ಆಗಿದ್ದಾರೆ.