ಮಂಗಳೂರು: ಇನ್ನೇನೋ ಹೊಸ ವರ್ಷ ಸಮೀಪಿಸುತ್ತಿದೆ. ಹೊಸ ವರ್ಷದ ಆಗಮನಕ್ಕೆ ಭರ್ಜರಿ ಸಿದ್ಧತೆಗಳು ನಡೆಯುತ್ತಿದೆ.
ನ್ಯೂ ಇಯರ್ ಸೆಲೆಬ್ರೆಷನ್ ಪ್ರತೀ ವರ್ಷ ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಜೋರಾಗಿಯೇ ಇರುತ್ತದೆ. ಈ ಬಾರಿಯೂ ಕೂಡಾ ಭರ್ಜರಿ ಪ್ಲ್ಯಾನಿಂಗ್ ನಡೀತ್ತಿದೆ.
ಇತ್ತೀಚಿನ ದಿನಗಳಲ್ಲಿ ಪಾರ್ಟಿಗಳಲ್ಲಿ ಡ್ರಗ್ಸ್, ಮದ್ಯ, ಇತರ ಮಾದಕ ವಸ್ತುಗಳನ್ನು ಬಳಸೋದು ಕಾಮನ್ ಆಗಿಬಿಟ್ಟಿದೆ.
ಅದಕ್ಕಾಗಿ ಈಗಿಂದಲೇ ಇಂತಹ ಮಾದಕವಸ್ತುಗಳನ್ನು ಸಂಗ್ರಹಿಸಿಡಲಾಗುತ್ತಿದೆ.
ಇದೀಗ ಮಂಗಳೂರಿನಲ್ಲೂ ಸಂಗ್ರಹಿಸಿಟ್ಟ ಮಾದಕ ವಸ್ತು ಪತ್ತೆಯಾಗಿದ್ದು ಇದನ್ನು ನೋಡಿ ಪೊಲೀಸರೇ ಅವಕ್ಕಾಗಿದ್ದಾರೆ.
9 ಲಕ್ಷ ಮೌಲ್ಯದ ಮಾದಕ ವಸ್ತು ಸೀಜ್ ಮಾಡಿದ ಪೊಲೀಸರು..!!
ಮಂಗಳೂರಿನಲ್ಲಿ ಹೊಸ ವರ್ಷ ಸಮೀಪಿಸುವಾಗ ಹಿಂದೂ ಸಂಘಟನೆಗಳು ನಗರದಲ್ಲಿ ನ್ಯೂ ಇಯರ್ ಸಂದರ್ಭ ಮಾದಕ ವಸ್ತು ಬಳಕೆ,
ಅಶ್ಲೀಲ ವರ್ತನೆಗೆ ಅವಕಾಶ ನೀಡಬಾರದು ಎಂಬ ಮನವಿಯನ್ನು ಪ್ರತೀ ಬಾರಿ ಮಂಗಳೂರು ಪೊಲೀಸ್ ಆಯುಕ್ತರಿಗೆ ಮಾಡುತ್ತಲೇ ಬರುತ್ತದೆ.
ಇದೀಗ ನಗರದಲ್ಲಿ ಹೊಸ ವರ್ಷದ ಆಚರಣೆಗೆ ತರಿಸಿದ್ದ 9 ಲಕ್ಷ ರೂ ಮೌಲ್ಯದ ಮಾದಕ ವಸ್ತುವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಕುಳೂರು ನದಿ ದಂಡೆಯಲ್ಲಿ ಡ್ರಗ್ಸ್ ಸ್ಕ್ವಾಡ್ ಹಾಗೂ ಕಾವೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಉಡುಪಿ ಜಿಲ್ಲೆಯ ದೇವರಾಜ್, ಮೊಹಮ್ಮದ್ ಫರ್ವೆಜ್ ಉಮರ್, ಶೇಖ್ ತಹೀಮ್ ಬಂಧಿತ ಆರೋಪಿಗಳಾಗಿದ್ದಾರೆ. ಇದೀಗ ಇನ್ನುಳಿದ ಆರೋಪಿಗಳಿಗೂ ಶೋಧ ಕಾರ್ಯ ನಡೆಯುತ್ತಿದೆ.
ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದೇನು..?
5 ಕೆಜಿ ಗಾಂಜಾ, 100 ಗ್ರಾಂ ಎಂಡಿಎಂಎ, 7 ಗ್ರಾಂ ಕೋಕೆನ್, 17 ಗ್ರಾಂ ಎಂಡಿಎಂಎ ಪಿಲ್ಸ್, 100 ಗ್ರಾಂ ಚರಸ್, 8 ಗ್ರಾಂ ಹೈಡ್ರೋವಿಡ್ ಗಾಂಜಾ ಮತ್ತು 3 ಎಲ್ಎಸ್ಡಿ ಸ್ಟ್ರಿಪ್ಸ್ ಸೇರಿದಂತೆ ಹರಿತವಾದ ಚಾಕು,
ಮಾದಕ ವಸ್ತು ಸಾಗಾಟ ಮಾಡಲು ಉಪಯೋಗಿಸಿದ ಕಾರು ಮತ್ತು ಸ್ಕೂಟರ್ ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಾರೆಯಾಗಿ ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ,
ಕಾನೂನು ಉಲ್ಲಂಘನೆ ಆಗದಂತೆ ತಡೆಯಲು ಪೊಲೀಸರು ಈಗಿನಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ.