ಭಯೋತ್ಪಾದಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ; ಕುಲ್ಗಾಮ್‌ ನಲ್ಲಿ 5 ಉಗ್ರರು ಹತ್ಯೆ!

  • 19 Dec 2024 02:52:01 PM


ಜಮ್ಮು ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಕಡರ್ನ ಎಂಬಲ್ಲಿ ಭದ್ರತಾ ಪಡೆಗಳು ಐದು ಭಯೋತ್ಪಾದಕರನ್ನು ಇಂದು (ಗುರುವಾರ) ಎನ್ಕೌಂಟರ್‌ ಮಾಡಿದ್ದಾರೆ.

 

ಭಯೋತ್ಪಾದಕರು ಅಡಗಿದ ಸ್ಥಳದ ಕುರಿತು ದೊರಕಿದ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

 

ಡಿಸೆಂಬರ್ 19 ರಂದು, ಭಯೋತ್ಪಾದಕರ ಅಡಗಿದ ಸ್ಥಳದ ಬಗ್ಗೆ ಖಚಿತ ಗುಪ್ತಚರ ಮಾಹಿತಿಯ ಮೇರೆಗೆ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು.

 

ಈ ವೇಳೆಯಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ ಪ್ರತಿರೋದ ತೋರಿಸಿದ ಕಾರಣ ಈ ಕಾರ್ಯಾಚರಣೆಯು ಎನ್ಕೌಂಟರ್‌ಗೆ ತಿರುಗಿತು ಎಂದು ವ್ಯಕ್ತ ಪಡಿಸಿದ್ದಾರೆ.

 

 

ಚಿನಾರ್ ಕಾರ್ಪ್ಸ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡು, ಭಯೋತ್ಪಾದಕರ ಮೇಲಿನ ಶೋಧ ಕಾರ್ಯಾಚರಣೆಯ ವೇಳೆಯಲ್ಲಿ,

 

ಅವರು ಗುಂಡು ಹಾರಿಸಿದ್ದರಿಂದ ನಮ್ಮ ಪಡೆಗಳು ಅದಕ್ಕೆ ಅನುಗುಣವಾಗಿ ತಿರುಗೇಟು ನೀಡಿ ಐವರು ಉಗ್ರರನ್ನು ನಿಷ್ಕ್ರಿಯಗೊಳಿಸಿದೆ ಎಂದು ಹೇಳಿದ್ದಾರೆ 

 

 

ಈ ಯಶಸ್ವಿ ಕಾರ್ಯಾಚರಣೆಯು ಭಯೋತ್ಪಾದನೆಯನ್ನು ತಡೆಯುವಲ್ಲಿ ಭದ್ರತಾ ಪಡೆಗಳ ನಿಷ್ಠೆ ಮತ್ತು ಸಾಮರ್ಥ್ಯವನ್ನು ಮತ್ತೆ ತೋರಿಸಿದೆ. 

 

ಹತ್ಯೆಗೊಳಗಾದ ಉಗ್ರರ ಗುರುತು ಮತ್ತು ಅವರ ಉದ್ದೇಶದ ಬಗ್ಗೆ ತನಿಖೆ ನಡೆಯುತ್ತಿದೆ.

 

ಘಟನೆಯ ಸ್ಥಳದಲ್ಲಿ ಈಗ ಹೆಚ್ಚಿನ ಭದ್ರತೆಯ ವ್ಯವಸ್ಥೆಯಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.