ಮಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಪಾಯಿಂಟ್ ಆಫ್ ಕಾಲ್ (PoC) ದರ್ಜೆ ನೀಡುವಂತೆ ಹಾಗೂ ನಿಲ್ದಾಣದ ವಿಸ್ತರಣೆ ಮತ್ತು ಹೆಚ್ಚುವರಿ ವಿಮಾನ ಮಾರ್ಗ ಸೌಲಭ್ಯಗಳನ್ನು ಒದಗಿಸುದರ ಕುರಿತು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.
PoC ದರ್ಜೆಯಿಂದ ಮಂಗಳೂರು ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ತರುವುದರ ಜೊತೆಗೆ ವಿದೇಶಿ ವಿಮಾನಗಳ ನೇರ ಸೇವೆಗಳಿಗೂ ಅವಕಾಶ ಸಿಗುತ್ತದೆ.
ವಿಮಾನ ನಿಲ್ದಾಣದ ವಿಸ್ತರಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ಪ್ರವಾಸಿಗರಿಗೂ ವ್ಯಾಪಾರ ಚಟುವಟಿಕೆಗಳಿಹೂ ಉತ್ತೇಜನ ನೀಡತ್ತದೆ.
ಸಚಿವರು ಈ ಮನವಿಗೆ ಸ್ಪಂದಿಸಿದಲ್ಲಿ, ಮಂಗಳೂರು ವಿಮಾನ ನಿಲ್ದಾಣವು ದಕ್ಷಿಣ ಭಾರತದ ಪ್ರಮುಖ ತ್ರಾನ್ಸಿಟ್ ಕೇಂದ್ರವಾಗಿ ಬೆಳೆಯುವ ನಿರೀಕ್ಷೆ ಇದೆ.