ಪುಣೆ: ಕಲಿಕೆ ಅಥವಾ ಮನರಂಜನೆಯ ವಿಚಾರಕ್ಕಾಗಿ ಮಕ್ಕಳಿಗೆ ಮೊಬೈಲ್ ಕೊಡುವ ಹಾಗೂ ಕೊಡಿಸುವ ಪೋಷಕರು ಈ ಬಗ್ಗೆ ಗಂಭೀರವಾಗಿ ಯೋಚಿಸುವಂತಹ ದುರಂತವೊಂದು ಇದೀಗ ಬೆಳಕಿಗೆ ಬಂದಿದೆ.
9ವರ್ಷದ ಬಾಲಕನೊಬ್ಬ ಮೊಬೈಲ್ ವಿಡಿಯೋ ನೋಡಿ 3 ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿರುವ ಶಾಕಿಂಗ್ ಸುದ್ದಿಯೊಂದು ಬಯಲಾಗಿದೆ. ಈ ಹೇಯ ಕೃತ್ಯ ನಡೆದಿದ್ದೆಲ್ಲಿ?, ಈ ಘಟನೆಯ ಹಿನ್ನಲೆಯೇನು? ಇಲ್ಲಿದೆ ವಿವರ.
ಘಟನೆಯ ವಿವರ?
ಪುಣೆಯ ಅಕ್ಕಪಕ್ಕದ ಮನೆಯಲ್ಲಿ ಅತ್ಯಾಚಾರಿ ಬಾಲಕ ಹಾಗೂ ಸಂತ್ರಸ್ತ ಮಗುವಿನ ಕುಟುಂಬ ವಾಸಿಸುತ್ತಿತ್ತು. ಎರಡು ಮನೆಯವರೂ ಅನ್ಯೋನ್ಯವಾಗಿದ್ದರು. ಮಗುವು ಬಾಲಕನನ್ನು ಅಣ್ಣ ಎಂದೇ ಕರೆಯುತ್ತಿತ್ತು.
ಡಿ.15 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕ ಮೊಬೈಲ್ ನಲ್ಲಿ ಅಶ್ಲೀಲ ವಿಡಿಯೋಗಳನ್ನು ವೀಕ್ಷಿಸಿದ ಬಳಿಕ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವಿಚಾರವನ್ನು ಮಗು ತಾಯಿಯ ಬಳಿ ಹೇಳಿದಾಗ ಅತ್ಯಾಚಾರದ ವಿಚಾರ ಬೆಳಕಿಗೆ ಬಂದಿದೆ.
ಬಾಲಕನನ್ನು ಬಂಧಿಸಿದ ಪೊಲೀಸರು!
ಮಗುವಿನ ಮೇಲೆ ಲೈಂಗಿಕ ಕಿರುಕುಳ ನಡೆದಿರುವುದು ತಿಳಿದ ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಬಾಲಕನನ್ನು ಬಂಧಿಸಿ ಜುವೆನೈಲ್ ಜಸ್ಟಿಸ್ ಬೋರ್ಡ್ ಮುಂದೆ ಹಾಜರು ಪಡಿಸಲಾಗಿದೆ.
ಸದ್ಯ, ಜಾಮೀನಿನ ಮೇಲೆ ಬಾಲಕ ಬಿಡುಗಡೆಯಾಗಿದ್ದರೂ ಕೂಡ, ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಪೋಷಕರು ಸಾವಿರ ಸಲ ಯೋಚಿಸಬೇಕು ಎಂಬ ಅಂಶವನ್ನು ಈ ಪ್ರಕರಣ ಸಾರಿ ಸಾರಿ ಹೇಳುತ್ತಿದೆ.