ಕಾಸರಗೋಡು : ಡೀಪ್ ಲವ್ ನಲ್ಲಿ ಸಿಲುಕಿದ ಇಬ್ಬರು ಅಪ್ರಾಪ್ತ ಜೋಡಿಗಳು ಹೇಳದೆ ಕೇಳದೆ ಮನೆಬಿಟ್ಟು ಪರಾರಿಯಾದ ಘಟನೆಯೊಂದು ಪಕ್ಕದ ಕಾಸರಗೋಡಿನಲ್ಲಿ ನಡೆದಿದೆ.ಕೇವಲ 16 ವರ್ಷದ ಯುವತಿ ಹಾಗೂ 18 ವರ್ಷದ ಹುಡುಗ ಪ್ರೀತಿಯಲ್ಲಿ ಬಿದ್ದು ಓಡಿಹೋಗಿದ್ದು, ಈ ಇಂಟ್ರೆಸ್ಟಿಂಗ್ ಘಟನೆಯ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ ನೋಡಿ.
ಅಪ್ರಾಪ್ತರ ನಡುವೆ ಡೀಪ್ ಲವ್!
ಶಾಲೆಗೆ ಹೋಗುತ್ತಿದ್ದ ಕಾಸರಗೋಡಿನ ಇಡುಕ್ಕಿಯ ವಿದ್ಯಾರ್ಥಿನಿ ಹಾಗೂ ದ್ವಿತೀಯ ಪಿಯೂಸಿ ಓದುತ್ತಿದ್ದ 18 ವರ್ಷದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದು, ದಿನಕಳೆದಂತೆ ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು ಪ್ರೀತಿಸಲು ಆರಂಭಿಸಿದ್ದಾರೆ.
ಅಂತಿಮವಾಗಿ ಓಡಿ ಹೋಗಲು ಮಾಸ್ಟರ್ ಪ್ಲಾನ್ ಮಾಡಿದ ಈ ಜೋಡಿ ಹೇಳದೆ ಕೇಳದೆ ಮನೆ ಬಿಟ್ಟು ಓಡಿ ಹೋಗಿದ್ದಾರೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ ಓಡಿ ಹೋಗಲು ಮೂರನೇ ವ್ಯಕ್ತಿ ಸಹಕಾರ ನೀಡಿದ್ದ.
ಕೊನೆಗೆ ಆಗಿದ್ದೇನು?
ಜೋಡಿಯೇನೋ ತಮ್ಮ ಪವಿತ್ರ ಪ್ರೇಮ ಉಳಿಸಿಕೊಳ್ಳಲು ಓಡಿ ಹೋದರು. ಆದರೆ ಈ ಇಬ್ಬರ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಎಷ್ಟೇ ಹುಡುಕಿದರೂ ಕೂಡ ಈ ಜೋಡಿ ಪತ್ತೆಯಾಗಿಲ್ಲ
ಅಂತಿಮವಾಗಿ ಟಿಕೆಟ್ ಇಲ್ಲದೇ ರೈಲಿನಲ್ಲಿ ಓಡಾಡುತ್ತಿದ್ದ ಈ ಜೋಡಿಯನ್ನು ರೈಲ್ವೆ ಅಧಿಕಾರಿಗಳು ಪೊಲೀಸರಿಗೆ ಒಪ್ಪಿಸಿದಾಗ ಇವರ ಅಸಲಿ ವಿಚಾರ ಲಭ್ಯವಾಗಿದೆ. ಸದ್ಯ, ಈ ಜೋಡಿಯನ್ನು ಪೋಷಕರ ವಶಕ್ಕೆ ನೀಡಲಾಗಿದೆ.