ತಮಿಳುನಾಡು : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರನ್ನು ಡಿಸೆಂಬರ್ 20 ರಂದು ಕೊಯಂಬತ್ತೂರ್ ಪೊಲೀಸರು ಬಂಧಿಸಿದ್ದಾರೆ.
1998ರಲ್ಲಿ ಕೊಯಂಬತ್ತೂರು ನ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿಯಾದವ್ ಎಸ್.ಎ. ಬಾಷಾ ಅವರ ಅಂತ್ಯಕ್ರಿಯೆಗೆ ಪೊಲೀಸರು ಅನುಮತಿ ನೀಡಿದ್ದ ವಿಚಾರವನ್ನು ವಿರೋಧಿಸಿ, ಅಣ್ಣಾಮಲೈ ಅವರು ಅನುಮತಿಯಿಲ್ಲದೆ ಪ್ರತಿಭಟನೆ ನಡೆಸದ್ದರು. ಆ ಕಾರಣಕ್ಕಾಗಿ ಪೊಲೀಸರು ಅವರನ್ನು ಬಂಧಿಸಿದರು.
1998ರಲ್ಲಿ ನಡೆದ ಕೊಯಂಬತ್ತೂರು ಬಾಂಬ್ ಸ್ಫೋಟದಲ್ಲಿ ಹಲವಾರು ಜನರು ಸಾವನ್ನಪ್ಪಿದ್ದು ಅಲ್ಲದೇ ಅನೇಕರಿಗೆ ಗಾಯಗೊಂಡಿತ್ತು.
ಈ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ ಬಾಷಾ ಪೆರೋಲ್ ಗೆ ಬಿಡುಗಡೆಯಾದ ನಂತರ ಡಿಸೆಂಬರ್ 17 ರಂದು ನಿಧನರಾದರು.
ಅವರ ಅಂತ್ಯಕ್ರಿಯೆಘಾಗಿ ಅನುಮತಿ ನೀಡಿದ ತಮಿಳುನಾಡಿನ ಸರ್ಕಾರದ ನಿರ್ಧಾರವನ್ನು ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಅದರ ವಿರುದ್ಧ ಪ್ರತಿಭಟನೆ ನಡೆಸಿದಕ್ಕಾಗಿ ಅಣ್ಣಾಮಲೈ ಮತ್ತು ಹಲವು ಬಿಜೆಪಿ ಮುಖಂಡರನ್ನು ಅರೆಸ್ಟ್ ಮಾಡಲಾಯಿತು.
ಈ ಘಟನೆಯ ನಂತರ ತಮಿಳುನಾಡಿನಲ್ಲಿ ರಾಜಕೀಯ ಅಶಾಂತಿ ಹೆಚ್ಚಾಗಿದೆ. ಬಿಜೆಪಿಯು ಡಿಎಂಕೆ ಸರ್ಕಾರವನ್ನು ಭಯೋತ್ಪಾದಕರನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದೆ. ಇದರಿಂದ ಈ ಪ್ರಕರಣವು ಎಲ್ಲೆಡೆ ಗಂಭೀರ ಚರ್ಚೆಗೆ ಕಾರಣವಾಗಿದೆ.