2010ರಲ್ಲಿ ಮೂಲ್ಕಿಯಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!!ಕೊಲೆಗೆ ಭಯಾನಕ ಕಾರಣ ಬಿಚ್ಚಿಟ್ಟ ಬಂಧಿತ ಆರೋಪಿಗಳು!

  • 21 Dec 2024 05:46:17 PM

ಮಂಗಳೂರು: ಇವತ್ತು ಸಮಾಜದಲ್ಲಿ ಮಾನವೀಯತೆಗೆ ಕಿಂಚಿತ್ತೂ ಬೆಲೆಯಿಲ್ಲದಂತಾಗಿದೆ. ಸಂಬಂಧವನ್ನೂ ಪರಿಗಣಿಸದೆ ಕಡಿದು ಬರ್ಬರವಾಗಿ ಹತ್ಯೆ ಮಾಡುವ ಕ್ರೂರಿಗಳ ನಡುವೆ ಇವತ್ತು ಒಳ್ಳೆತನ ಸತ್ತು ಹೋಗಿದೆ. ದೂರದೂರಿನಲ್ಲಿ ನಡೆಯುತ್ತಿದ್ದ ಕ್ರೈಮ್ ಪ್ರಕರಣಗಳನ್ನು ನಾವು ಟಿವಿ, ಪೇಪರ್ ನಲ್ಲಿ ನೋಡುತ್ತಿದ್ದ ಕಾಲವಿತ್ತು.

 

ಆದರೆ ಈಗ ನಮ್ಮ ಊರಿನಲ್ಲೇ ಇಂತಹ ಹೃದಯವಿದ್ರಾವಕ ಘಟನೆಗಳು ನಡೆಯುತ್ತಿರುವುದು ವಿಪರ್ಯಾಸ. ಇದೀಗ ಮಂಗಳೂರು ಹೊರವಲಯದ ಮುಲ್ಕಿಯಲ್ಲಿ ನಡೆದಿದ್ದ ಭೀಕರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 

 

ಏನಿದು ಪ್ರಕರಣ...?

 

ಪ್ರಕರಣದ ಆರೋಪಿಗಳಾದ ಬಿಹಾರ ಮೂಲದ ಸನ್ನಿಬಾಬು ಮತ್ತು ಗಲ್ಲುರಾಮ ಅಲಿಯಾಸ್ ಸಚಿನ್ ಅಲಿಯಾಸ್ ನವೀನ ಎಂಬ ಇಬ್ಬರು ಯುವಕರಿಗೆ ಮತ್ತು ಒಬ್ಬಾತನ ತಂದೆ- ತಾಯಿಗೆ ಶರಣಪ್ಪ ಎಂಬಾತ ಅವಾಚ್ಯ ಶಬ್ಧಗಳಿಂದ ಬೈದು ಅವಮಾನಿಸಿದ ಎಂಬ ಕಾರಣಕ್ಕೆ ಅವರಿಬ್ಬರು ಸೇರಿ ಶರಣಪ್ಪನ ಕುತ್ತಿಗೆಗೆ ಚೂರಿಯಿಂದ ಚುಚ್ಚಿ-ಚುಚ್ಚಿ ಕೊಯ್ದು ಹತ್ಯೆ ಮಾಡಿದ್ದಾರೆ.

 

2020ರ ಜನವರಿ 30ರ ರಾತ್ರಿ ಸುಮಾರು 10-00 ಗಂಟೆಗೆ ಮುಲ್ಕಿ ತಾಲ್ಲೂಕ್ ಕಾರ್ನಾಡ್ ಗ್ರಾಮದ ವನಭೋಜನ ಎಂಬಲ್ಲಿ ಈ ಘಟನೆ ನಡೆದಿತ್ತು. ಈ ಘಟನೆಯಿಂದ ಮುಲ್ಕಿಯ ಜನತೆ ನಿಬ್ಬೆರಗಾಗಿದ್ದರು.

 

ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ..!!

 

ಈ ಘಟನೆಗೆ ಸಂಬಂಧಿಸಿದಂತೆ ಮಾನ್ಯ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ಕಾಂತರಾಜು ಎಸ್‌.ವಿ ರವರು ಆರೋಪಿಗಳಿಗೆ ಕಲಂ 302 ಐಪಿಸಿ ಪ್ರಕಾರ ಜೀವಾವಧಿ ಶಿಕ್ಷೆ ಮತ್ತು ತಲಾ 10000 ದಂಡ, ಹಾಗೂ 341ಐಪಿಸಿಗೆ 01 ತಿಂಗಳ ಸಜೆ ಮತ್ತು ತಲಾ 500 ರೂ. ದಂಡ ವಿಧಿಸಿದೆ.

 

ಮಾನ್ಯ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿಯನ್ನು ಮುಲ್ಕಿ ಠಾಣಾ ಪಿ ಐ ಜಯರಾಮ್ ಗೌಡರವರು ಸಲ್ಲಿಸಿದ್ದು ತನಿಖಾ ಸಹಾಯಕರಾಗಿ ಎಎಸ್ಐ ಉಮೇಶ್ ಸಹಕರಿಸಿದ್ದರು. ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ಮೋತಿಲಾಲ್ ಚೌದರಿರವರು ಸಾಕ್ಷಿಗಳನ್ನು ವಿಚಾರಣೆ ಮಾಡಿ ವಾದ ಮಂಡಿಸಿದ್ದರು. ಒಟ್ಟಿನಲ್ಲಿ ಆರೋಪಿಗಳಿಗೆ ಕೋರ್ಟ್ ಶಿಕ್ಷೆ ವಿಧಿಸುವುದರ ಮುಖೇನ ಪ್ರಕರಣ ಅಂತ್ಯ ಕಂಡಿದೆ.