ಉಡುಪಿ| ಮೈಮೇಲೆ ಬರೆ ಬರುವಂತೆ ವಿದ್ಯಾರ್ಥಿಗೆ ಥಳಿಸಿದ ಅದಿ ಕಿಲ್ಲೂರು ಎಂಬ ಶಿಕ್ಷಕ!;ಮಗನ ಸ್ಥಿತಿ ಕಂಡು ಕಣ್ಣೀರಿಟ್ಟ ಪೋಷಕರು!

  • 21 Dec 2024 06:39:09 PM

ಕಾರ್ಕಳ: ಇತ್ತೀಚೆಗಷ್ಟೇ ಮದರಸಾಗಳಲ್ಲಿ ರೈಲ್ವೇ ಹಳಿ ತಪ್ಪಿಸಲು ಯುವಕರಿಗೆ ತರಬೇತಿ ನೀಡಲಾಗುತ್ತಿದೆ ಎಂಬ ಸುದ್ದಿ ದೇಶದಾದ್ಯಂತ ಬಾರೀ ಸುದ್ದಿಯಾಗಿತ್ತು.

 

ಇದೀಗ ಉಡುಪಿಯ ಮದರಾಸಿ ಶಿಕ್ಷಣ ಕೇಂದ್ರವೊಂದರಲ್ಲಿ ವಿದ್ಯಾರ್ಥಿಯೊಬ್ಬನಿಗೆ ಅಲ್ಲಿನ ಶಿಕ್ಷಕನೊಬ್ಬ ಮೈಮೇಲೆ ಬರೆ ಬರುವಂತೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

ಶಿಕ್ಷಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ!

 

 ಅನ್ಯಮತೀಯ ಧಾರ್ಮಿಕ ಶಿಕ್ಷಣ ಸಂಸ್ಥೆ ತೈಭಾ ಗಾರ್ಡನ್ ಮುಖ್ಯಸ್ಥ ಅದಿ ಕಿಲ್ಲೂರು ತಮ್ಮದೇ ಸಂಸ್ಥೆಯ ವಿದ್ಯಾರ್ಥಿಯೊಬ್ಬನಿಗೆ ಬೆನ್ನಿನ ಮೇಲೆ ಬರೆ ಬರುವಂತೆ ಹಿಗ್ಗಾಮುಗ್ಗ ಥಳಿಸಿದ್ದಾನೆ‌.

 

ಕಾರ್ಕಳದ ಬಂಗ್ಲಗುಡ್ಡೆ ಎಂಬಲ್ಲಿ ಈ ಅಮಾನವಿಯ ಘಟನೆ ನಡೆದಿದ್ದು, ಮಗನ ಸ್ಥಿತಿ ಕಂಡು ಪೋಷಕರು ಕಣ್ಣೀರಿಟ್ಟಿದ್ದಾರೆ.

 

ಅದಿ ಕಿಲ್ಲೂರು ವಿರುದ್ಧ ಪ್ರಕರಣ ದಾಖಲು!

 

ಅದಿ ಕಿಲ್ಲೂರು ಮಗನ‌ ಮೇಲೆ ಮನಬಂದಂತೆ ಹಲ್ಲೆ ನಡೆಸಿರುವುದನ್ನು ಕಂಡಿರುವ ಪೋಷಕರು ಕಂಗಾಲಾಗಿದ್ದಾರೆ.

 

ಜೊತೆಗೆ ಮೃಗಿಯವಾಗಿ ವರ್ತಿಸಿರುವ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೊರೆ ಹೋಗಿದ್ದಾರೆ.

 

ಸದ್ಯ, ಈ ವಿಚಾರದ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾರ್ವಜನಿಕರು‌ ಕೂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.