ಕಾಸರಗೋಡು: ಇತ್ತೀಚೆಗೆ ಸಮಾಜದಲ್ಲಿ ಲವ್ ಜಿಹಾದ್ ನಂತಹ ಪ್ರಕರಣಗಳು ಕಾನೂನಿನ ಭಯವಿಲ್ಲದೆ ಎಲ್ಲೆ ಮೀರಿ ಸಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಬಂದ ಮೇಲಂತೂ ಇವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ.
ಅದೆಷ್ಟೋ ಹಿಂದು ಯುವತಿಯರು ಅನ್ಯ ಕೋಮಿನ ಜಿಹಾದಿಗಳ ಆಮಿಷಕ್ಕೆ ಬಲಿಯಾಗಿ ತಮ್ಮ ಜೀವನವನ್ನೇ ನರಕವನ್ನಾಗಿಸುತ್ತಿದ್ದಾರೆ.
ಇದೀಗ ದಾಹ ತಲೆಗೇರಿದ ಅನ್ಯ ಕೋಮಿನ ಕಾಮುಕನೋರ್ವ ತನ್ನ ಕಾಮೋದ್ರೇಕ ತೀರಿಸಲು ಬಾಲಕಿಯ ಮೇಲೆರಗಲು ಯತ್ನಿಸಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ತಾಯಿ ಜೊತೆ ಇರುವಾಗಲೇ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಭೂಪ...!!
ಕಾಸರಗೋಡಿನ ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ಅನ್ಯಕೋಮಿನ ಪುರುಷನೋರ್ವ ತಾಯಿ ಜತೆ ನಡೆದುಕೊಂಡು ಹೋಗುತ್ತಿದ್ದ 16 ವರ್ಷದ ಬಾಲಕಿಯ ದೇಹ ಸ್ಪರ್ಶಿಸಿ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ ಘಟನೆಯೊಂದು ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ನೆಕ್ರಾಜೆ ನೆಲ್ಲಿಕಟ್ಟೆ ಲಕ್ಷಂವೀಡು ಕಾಲನಿಯ ನವಾಜ್ ಪಿ.ಎಂ. (40) ವಿರುದ್ಧ ಪೊಲೀಸರು ಪೋಕ್ಸೋ ಕೇಸು ದಾಖಲಿಸಿ ಆತನನ್ನು ಅರೆಸ್ಟ್ ಮಾಡಿದ್ದಾರೆ.
ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಈ ಕೇಸು ದಾಖಲಿಸಲಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಂಗ ಬಂಧನ ವಿಧಿಸಿದೆ.
ಡಿ.19ರಂದು ಈತನ ಮೇಲೆ ದಾಖಲಾಗಿದ್ದ ಮತ್ತೊಂದು ದೂರು..!!
ಕಾಸರಗೋಡು ಸಬ್‌ಜೈಲ್ ಸಮೀಪ ಡಿ. 19 ರಂದು ಬೆಳಗ್ಗೆ ನಿಲ್ಲಿಸಿದ್ದ ಕಾರಿನ ಗಾಜನ್ನು ಕಲ್ಲಿನಿಂದ ಪುಡಿಗೈದು ಕಾರಿನೊಳಗಿದ್ದ ಬ್ಯಾಗ್ ಮತ್ತು ಮೊಬೈಲ್ ಫೋನ್ ಕಳವುಗೈದಿರುವುದಾಗಿ ಇದೇ ಆರೋಪಿಯ ವಿರುದ್ಧ ಕಾಸರಗೋಡು ಅಣಂಗೂರು ಶಿವಶೈಲ ನಿವಾಸಿ ಸುಕುಮಾರನ್ ಕಾಸರಗೋಡು ಪೊಲೀಸರಿಗೆ ದೂರು ನೀಡಿದ್ದರು.
ಒಟ್ಟಿನಲ್ಲಿ ಆರೋಪಿ ನವಾಜ್ ನ ಮೇಲೆ ಕಳ್ಳತನ ಸೇರಿದಂತೆ ಇದೀಗ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆಯೂ ದೂರು ದಾಖಲಾಗಿದೆ.