ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಾಮುಕ!; ಮುಖ ಕಿತ್ತು ಹೋಗುವಂತೆ 26 ಬಾರಿ ಕಪಾಳಮೋಕ್ಷ ಮಾಡಿದ ದಿಟ್ಟ ಮಹಿಳೆ!

  • 22 Dec 2024 02:04:37 PM

ಸಾರ್ವಜನಿಕ‌ ಸ್ಥಳಗಳಲ್ಲಿ, ಬಸ್ಸು, ರೈಲು ಸಂಚಾರದಲ್ಲಿ ಕೆಲವೊಬ್ಬ ಬೀದಿ ಕಾಮಣ್ಣರು ಮಹಿಳೆಯರಿಗೆ ಲೈಂಗಿಕ‌ ಕಿರುಕುಳ ನೀಡುತ್ತಾರೆ. ಹೆಚ್ಚಿನ ಮಹಿಳೆಯರು ಯುವತಿಯರು ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ.

 

ಆದರೆ ಇನ್ನು ಕೆಲ ಮಹಿಳೆಯರು ದಿಟ್ಟವಾಗಿ ಕಿರುಕುಳವನ್ನು ಸಾರ್ವಜನಿಕವಾಗಿಯೇ ಎದುರಿಸುತ್ತಾರೆ. ಸದ್ಯ, ಅಂತಹದ್ದೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

 

ಬಸ್ಸಿನಲ್ಲಿ ಕಾಮುಕನ‌ ಕೈಚಳಕ!

 

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಎದುರಿನ ಸೀಟ್ ನಲ್ಲಿ ಕುಳಿತಿದ್ದ ಮಹಿಳೆಯೊಬ್ಬರ ಮೈಮುಟ್ಟಿ ಕಿರುಕುಳ ನೀಡಿದ್ದಾನೆ.

 

ಸ್ವಲ್ಪ ಹೊತ್ತು ಇದನ್ನು ವಿರೋಧಿಸದೆ ಸುಮ್ಮನಿದ್ದ ಮಹಿಳೆಗೆ ಆ ಬಳಿಕವೂ ಕಿರಿಕಿರಿ ತಪ್ಪಿಲ್ಲ.

 

ಅಂತಿಮವಾಗಿ ಕಾಮುಕನ ಕೈಚಳಕದಿಂದ ಕೆಂಡಾಮಂಡಲವಾದ ಮಹಿಳೆ ಏಕಾಏಕಿ‌ ದುರ್ಗಿಯ ಅವತಾರ ತಾಳಿದ್ದಾರೆ.

 

26 ಬಾರಿ ಕಪಾಳಮೋಕ್ಷ!

 

ಕಾಮುಕನ ಕಿರುಕುಳ ಸಹಿಸದೆ ಕೆಂಡಾಮಂಡಲವಾದ ಮಹಿಳೆ ಆತನ‌ ಕಾಲರ್ ಹಿಡಿದು ಹಲ್ಲುಗಳು ಉದುರುವಂತೆ ಕಪಾಳಕ್ಕೆ ಬಾರಿಸಿದ್ದಾರೆ.

 

ಒಂದೆರಡು ಏಟಿನಿಂದ ಕಂಗಾಲದ ಕಾಮುಕ ಕುಡುಕ ಕೈಮುಗಿದು ಕ್ಷಮೆ ಕೇಳಿದ್ದಾನೆ.

 

ಆದರೆ ಸಮಾದಾನಗೊಳ್ಳದ ಮಹಿಳೆ ಮನಬಂದಂತೆ ಬರೋಬ್ಬರಿ 26 ಬಾರಿ ಕಪಾಳಮೋಕ್ಷ ಮಾಡಿದ್ದಾರೆ.

 

ಬಸ್ಸಿನಲ್ಲಿದ್ದ ಇತರರು ಕೂಡ ಇದನ್ನು‌ ತಡೆಯದೆ ಕಾಮುಕನ ಚಳಿ ಬಿಡುವಂತೆ ಮಾಡಿದ್ದಾರೆ.ಸದ್ಯ,

 

ಈ ವಿಡಿಯೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.