ಪೆರ್ಲ: ಪೆರ್ಲ ಪೇಟೆಯ ಹೃದಯ ಭಾಗದಲ್ಲಿರುವ ಬಿ.ಗೋಪಿನಾಥ ಪೈ ಅವರ ಬಿಲ್ಡಿಂಗ್ ಶನಿವಾರ ಮಧ್ಯರಾತ್ರಿಯ ವೇಳೆಯಲ್ಲಿ ಭೀಕರ ಅಗ್ನಿ ಅನಾಹುತ ತುತ್ತಾಗಿ 9 ವ್ಯಾಪಾರ ಸಂಸ್ಥೆಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ.
ಈ ದುರಂತವು ಪೆರ್ಲ ಸ.ನಾ. ಹೈಸ್ಕೂಲಿನ ದ್ವಾರದ ಹತ್ತಿರವಿರುವ ಇರುವ ಕಟ್ಟಡದಲ್ಲಿ ನಡೆಯಿತು. ಮಧ್ಯರಾತ್ರಿಯಿಂದ ಕಾಣಿಸಿಕೊಂಡ ಬೆಂಕಿಯು ಆದಿತ್ಯವಾರ ಬೆಳಗಿನ ಜಾವದ ವರೆಗೂ ಉರಿದು ಅಲ್ಲಿದ್ದ ಗೌತಮ್ ಕೋಲ್ಡ್ ಹೌಸ್,
ಗೋಪಿಕಾ ಟೆಕ್ಸ್ ಟೈಲ್ಸ್, ಫ್ಯಾನ್ಸಿ ಅಂಗಡಿ, ಆಟೋಮೋಬೈಲ್ ಸ್ಪೇರ್ ಪಾರ್ಟ್ಸ್ ಅಂಗಡಿ, ಮತ್ತು ಎಕೆಎಂ ವೆಜಿಟೇಬಲ್ಸ್ ಸೇರಿದಂತೆ 9 ಅಂಗಡಿಗಳು ಬೆಂಕಿಗೆ ಸುಟ್ಟು ಬೂದಿಯಾದವು.
ಇದರಿಂದ ಅಲ್ಲಿರುವ ಪ್ರತಿಯೊಬ್ಬ ವ್ಯಾಪಾರಸ್ಥ ನ ಜೀವನಕ್ಕೂ ದೊಡ್ಡ ದುರಂತವೇ ಉಂಟಾಯಿತು.
ದೂರದ ಪ್ರದೇಶಗಳಿಂದ ಆಗಮಿಸಿದ 6 ಅಗ್ನಿಶಾಮಕ ದಳಗಳು ಬೆಂಕಿ ನಂದಿಸಲು ಪ್ರಯತ್ನಿಸಿದ್ದರೂ,
ಫಲಕಾರಿಯಾಗದೆ ಅಗಾಧ ಹಾನಿ ಉಂಟಾಯಿತು. ಪ್ರಾಥಮಿಕ ತನಿಖೆಯಲ್ಲಿ ಈ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ವರದಿಯಾಗಿದೆ.
ಆದರೂ ಈ ಅತಿ ಭೀಕರ ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಬೇಕೆಂದು ಸ್ಥಳೀಯರು ಆಗ್ರಹವನ್ನು ವ್ಯಕ್ತ ಪಡಿಸಿದ್ದಾರೆ
ದುರ್ಘಟನೆಗಳಿಗೆ ತಕ್ಷಣ ಸ್ಪಂದಿಸಲು ಅಗ್ನಿಶಾಮಕ ಘಟಕದ ವ್ಯವಸ್ಥೆ
ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲೂ ಬೇಕು ಎಂದೂ ಅಗ್ನಿಶಾಮಕ ಘಟಕಗಳ ಕೊರತೆಯು ಅತಿ ದೊಡ್ಡ ಸಮಸ್ಯೆಯಾಗಿದೆ ಇದನ್ನು ಬಗೆ ಹರಿಸ ಬೇಕೆಂದು ನಾಗರಿಕರು ಒತ್ತಿ ಹೇಳಿದರು.
ಬದಿಯಡ್ಕ, ದೇಲಂಪಾಡಿ, ಮತ್ತು ಬೆಳ್ಳೂರು ಪ್ರದೇಶಗಳಲ್ಲಿ ಅಗ್ನಿಶಾಮಕ ಘಟಕ ಸ್ಥಾಪನೆಯ ಅಗತ್ಯವಿದೆ ಎಂದು ಕೂಡ ಹೇಳಿದರು.