ಪುತ್ತೂರು| ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೈಚಳಕ ತೋರಿಸಿದ 3 ಖತರ್ನಾಕ್ ಕಳ್ಳಿಯರು ಅರೆಸ್ಟ್!;ಕಳ್ಳಿಯರು ಪೊಲೀಸ್ ಬಲೆಗೆ ಬಿದ್ದಿದ್ದೇ ರೋಚಕ!

  • 23 Dec 2024 03:48:59 PM

ಪುತ್ತೂರು: ಕಳೆದ ಕೆಲವು ದಿನಗಳಿಂದ ಪುತ್ತೂರು ನಗರದಲ್ಲಿ ತಮ್ಮ ಕೈಚಳಕದಿಂದ ಚಿನ್ನಾಭರಣ ಎಗರಿಸುತ್ತಿದ್ದ 3 ಜನ ಖತರ್ನಾಕ್ ಕಳ್ಳಿಯರ ಹೆಡೆಮುರಿಕಟ್ಟುವಲ್ಲಿ ಪುತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ.

 

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ‌ ಭಾಗಿಯಾದ ಮಂಗಳೂರು ಮೂಲದ ಇಬ್ಬರು ಹಾಗೂ ಬೆಂಗಳೂರಿನ ಒಬ್ಬಳು ಸೇರಿದಂತೆ ಒಟ್ಟು 3 ಜನ ಕಳ್ಳಿಯರನ್ನು‌ ಬಂಧಿಸಲಾಗಿದ್ದು,ಈ ಬಗೆಗಿನ ಮಾಹಿತಿ ಇಲ್ಲಿದೆ.

 

ಪ್ರಕರಣ ಸಂಖ್ಯೆ-1

 

ಡಿಸೆಂಬರ್ 19 ರಂದು ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗೋಳ್ತಮಜಲು ಗ್ರಾಮದ ನಿವಾಸಿ ಶ್ರೀಮತಿ ಸರಸ್ವತಿ ಎಂಬವರ ಬ್ಯಾಗಿನಲ್ಲಿದ್ದ ಚಿನ್ನಾಭರಣ ಕಳವಾದ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಬೆಂಗಳೂರಿನ ರಾಜಾಜಿ‌ ನಗರ ನಿವಾಸಿಯಾದ ಜ್ಯೋತಿ ಹಾಗೂ ಮಂಗಳೂರು ಮೂಲದ ಯಶೋಧ ಎಂಬ ಕಳ್ಳಿಯರಿಂದ ಕಳವಾಗಿದ್ದ 25 ಸಾವಿರ ಬೆಲೆಯ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.

 

ಪ್ರಕರಣ ಸಂಖ್ಯೆ-2

 

ಡಿಸೆಂಬರ್ 13 ರಂದು ಪುತ್ತೂರಿನ ಕೋರ್ಟ್ ರಸ್ತೆಯಲ್ಲಿರುವ ಜ್ಯುವೆಲರ್ಸ್ ಶಾಪ್ ನಿಂದ ಚಿನ್ನ ಖರೀದಿ ಮಾಡುವ ನೆಪದಲ್ಲಿ‌ ಬಂದ ಕಳ್ಳಿಯೊಬ್ಬಳು 77000 ರೂ. ಬೆಲೆಯ ಮೂರು ಚಿನ್ನದ ಉಂಗುರಗಳನ್ನು ಕದ್ದಿದ್ದಳು.

 

ಈ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಖತರ್ನಾಕ್ ಕಳ್ಳಿ ಮಂಗಳೂರು ಮೂಲದ ವಿದ್ಯಾಳನ್ನು ಬಂಧಿಸಿದ ಪೊಲೀಸರು 77000 ರೂ.ಮೊತ್ತದ ಚಿನ್ನ ವಶಪಡಿಸಿಕೊಂಡಿದ್ದಾರೆ.