ಬಂಟ್ವಾಳದಲ್ಲಿ ಸ್ಕೂಲ್ ಡೇಗೆ ಬಂದಿದ್ದ ಯುವತಿಯ ಅತ್ಯಾಚಾರ ಮಾಡಿದ ಕಾಮುಕ!; ಕೊನೆಗೂ ಆರೋಪಿ ಅರೆಸ್ಟ್..!

  • 23 Dec 2024 03:58:08 PM

ಬಂಟ್ವಾಳ: ದೇಶ ಎಷ್ಟೇ ಮುಂದುವರೆದರೂ ಕೂಡಾ ಇಂದಿಗೂ ಭಾರತದಲ್ಲಿ ಮಹಿಳೆಯರು ಸ್ವತಂತ್ರವಾಗಿ ತಿರುಗಾಡುವಂತಿಲ್ಲ. ಸೂಕ್ತ ಭದ್ರತೆಯಿಲ್ಲದೆ ಭಯದಲ್ಲೇ ಜೀವನ ನಡೆಸುವಂತಾಗಿದೆ.

 

ಇತ್ತೀಚೆಗಂತೂ ದೇಶದ ಯಾವುದೋ ಮೂಲೆಯಲ್ಲಿ ಮಾತ್ರವಲ್ಲ ನಮ್ಮ ಊರಿನಲ್ಲೇ ಅತ್ಯಾಚಾರ ಪ್ರಕರಣಗಳು ಎಲ್ಲೆ ಮೀರಿ ಸಾಗುತ್ತಿದೆ. ಇದೀಗ ಬಂಟ್ವಾಳದಲ್ಲಿ ನಡೆದ ಲೈಂಗಿಕ ಕಿರುಕುಳ ಪ್ರಕರಣ ಅಲ್ಲಿಯ ಸ್ಥಳೀಯರನ್ನೇ ಬೆಚ್ಚಿ ಬೀಳಿಸಿದೆ.

 

ಸ್ಕೂಲ್ ಡೇಯಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿದ ಕಾಮುಕ...!!

 

ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

 

ಪ್ರಕರಣದ ಆರೋಪಿಯನ್ನು ನಾವೂರು ನಿವಾಸಿ ಜಯಂತ ಎಂದು ಗುರುತಿಸಲಾಗಿದೆ. ಈತನನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ಶಿವಕುಮಾರ್ ನೇತೃತ್ವದ ತಂಡ ಬಂಧಿಸಿದೆ. ಸದ್ಯ ಆತ ಜೈಲುವಾಸ ಅನುಭವಿಸುತ್ತಿದ್ದಾನೆ.  

 

ನಡೆದ ಘಟನೆಯೇನು..? 

 

ಡಿ.೧೪ರಂದು ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ನೋಡಲು ಅಲ್ಲಿಯ ಸ್ಥಳೀಯ ಯುವತಿಯೋರ್ವಳು ಅವಳ ಮನೆಯವರ ಜೊತೆ ಹೋಗಿದ್ದಳು.

 

ಈ ಸಂದರ್ಭ ಆರೋಪಿ ಜಯಂತ್ ಆಕೆಯನ್ನು ಕರೆದೊಯ್ದು ಶಾಲಾ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಈ ಬಗ್ಗೆ ಸಂತ್ರಸ್ತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿದೆ.

 

ಇದೀಗ ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.