ಮಂಗಳೂರು| ಮೇಯಲು ಬಿಟ್ಟ ದನಗಳನ್ನು‌ ಕದ್ದು ಮಾಂಸ ಮಾಡಿದ ರಾಕ್ಷಸರು!;ಆರೋಪಿಗಳಾದ ರಫೀಕ್ ಮತ್ತು ಶೌಕತ್ ಬಂಧನ!

  • 24 Dec 2024 11:38:32 AM

ಮಂಗಳೂರು: ಹಿಂದೂಗಳು ಪೂಜ್ಯ ಸ್ಥಾನದಲ್ಲಿಟ್ಟು ಪೂಜಿಸುವ ಗೋಮಾತೆಯನ್ನು ಕದಿಯುವ, ಕೊಲ್ಲುವ ಅನ್ಯಕೋಮಿನ ರಾಕ್ಷಸರ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ. ಇದೀಗ ಇಂತಹದ್ದೇ ಪ್ರಕರಣವೊಂದು ಮಂಗಳೂರಿನ ಬಜ್ಪೆಯಲ್ಲಿ‌ ಬೆಳಕಿಗೆ ಬಂದಿದೆ. ಮೇಯಲು ಬಿಟ್ಟಿದ್ದ ಎರಡು ಹಸುಗಳನ್ನು

 

ಕದ್ದೊಯ್ದ ಖದೀಮರು ಅವುಗಳನ್ನು ಕೊಂದು ಮಾಂಸ ಮಾಡಿದ್ದಾರೆ. ಈ ಬಗೆಗಿನ ವರದಿ‌ ಇಲ್ಲಿದೆ ನೋಡಿ.

 

ಆರೋಪಿಗಳು ಅರೆಸ್ಟ್!

 

ಬಜ್ಪೆಯಲ್ಲಿ ಮೇಯಲು ಬಿಟ್ಟ ದನಗಳು‌ ಕಳವಾದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರ ಗೋಭಕ್ಷಕರ ಹೆಡೆಮುರಿ ಕಟ್ಟಿದ್ದಾರೆ.

 

ಆರೋಪಿಗಳಾದ ಮೂಡಬಿದಿರೆಯ ಕರಿಂಜೆ‌ ಗ್ರಾಮ ನಿವಾಸಿ ಮಹಮ್ಮದ್ ರಫೀಕ್(31) ಹಾಗೂ ಕಲ್ಲಬೆಟ್ಟಿ ನಿವಾಸಿ ಶೌತಕ್ ನನ್ನು‌ ಬಂಧಿಸಿದ್ದು, ದನ ಕಳವಿಗೆ ಬಳಸಿದ್ದ 3ಲಕ್ಷ ಬೆಲೆಯ ರಿಡ್ಜ್ ಕಾರು, ಇತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

 

ಖತರ್ನಾಕ್ ಗೋ ಕಳ್ಳರು!

 

ಸದ್ಯ, ಬಜ್ಪೆಯಲ್ಲಿ ದನ ಕದ್ದು ಪೊಲೀಸ್ ಬಲೆಗೆ ಬಿದ್ದಿರುವ ಮಹಮ್ಮದ್ ರಫೀಕ್ ಹಾಗೂ ಶೌತಕ್ ಆಲಿ ಸಾಮಾನ್ಯರಲ್ಲ. ಕೊಲೆ ಸುಲಿಗೆ ಕಳ್ಳತನದಲ್ಲಿ ಮಹಾನ್‌ ಪಟಿಂಗರು.‌ಇವರಿಬ್ಬರ ಮೇಲೆ ಈ ಹಿಂದೆ ಮೂಡಬಿದಿರೆ, ಉಡುಪಿ, ಕಾರ್ಕಳ, ಅಜೆಕಾರ್ ಹಾಗೂ ಚಿಕ್ಕಮಗಳೂರು ಪೊಲೀಸ್ ಠಾಣೆ ಸೇರಿದಂತೆ ಹಲವೆಡೆ ದನ ಕಳವು ಪ್ರಕರಣದಲ್ಲಿ ಕೇಸ್ ದಾಖಲಾಗಿದೆ.

 

ಈಗಾಗಲೇ ಇಬ್ಬರನ್ನೂ ಬಂಧಿಸಲಾಗಿದ್ದು, ಈ ಗೋ ಕಳ್ಳತನದ ಜಾಲದಲ್ಲಿ ಇನ್ಯಾರಿದ್ದಾರೆ ಎಂಬುದರ‌ ಬಗ್ಗೆ ತನಿಖೆ‌ ನಡೆಯುತ್ತಿದೆ.