ಮುಲ್ಕಿ: ಹಳೆಯಂಗಡಿ ರೈಲ್ವೇ ಗೇಟ್ನ ಹತ್ತಿರ ಪಿಕಪ್ ವಾಹನ ಚಲಾಯಿಸುತ್ತಿದ್ದ ಚಾಲಕನ ಅಜಾಗರೂಕತೆ ಮತ್ತು ನಿರ್ಲಕ್ಷದಿಂದ ರೈಲ್ವೆ ಗೇಟ್ ಗೆ ಗಾಡಿ ಡಿಕ್ಕಿ ಹೊಡೆದು ಭಾರೀ ಅನಾಹುತ ಸಂಭವಿಸಬೇಕಾದ ಘಟನೆ ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಇಂದ್ರನಗರದ ರೈಲ್ವೇ ಗೇಟ್ ತಲುಪುತ್ತಿದ್ದ ಪಿಕಪ್ ಚಾಲಕನು , ಗೇಟ್ ಸಿಬ್ಬಂದಿ ಬಾರಿಯರ್ ಹಾಕುವ ವೇಳೆಯಲ್ಲಿ ರೂಲ್ಸ್ ಬ್ರೇಕ್ ಮಾಡುವ ಪ್ರಯತ್ನ ನಡೆಸಿ ನುಗ್ಗಲು ಪ್ರಯತ್ನಿಸಿದ್ದರಿಂದ ದಿಕ್ಕಿಹೊಡೆದು ಗೇಟ್ ತುಂಡು ಆಗಿದೆ.
ಗೇಟ್ ಸಿಬ್ಬಂದಿಯ ಸಮಯ ಪ್ರಜ್ಞಾ ಪ್ರವರ್ತನೆಯಿಂದ ಆಗುವ ದೊಡ್ಡ ಅಪಾಯವನ್ನು ತಡೆಯಲು ಸಾಧ್ಯವಾಯಿತು.
ಇದೀಗ ತಾತ್ಕಾಲಿಕವಾಗಿ ಕಬ್ಬಿಣದ ರಾಡ್‌ಗಳನ್ನು ಅಳವಡಿಸಿ ಗೇಟ್ ಬಳಿ ರಕ್ಷಣಾ ಕ್ರಮಗಳನ್ನು ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ರೈಲ್ವೇ ಪೊಲೀಸರುಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪಿಕಪ್ ಚಾಲಕನ ವಿರುದ್ಧ ಕಾನೂನು ಕ್ರಮ ತೆಗೆದು ಕೊಂಡಿದ್ದಾರೆ.