ಹಳ್ಳಿಗಳಲ್ಲಿ ವಾಸವಾಗಿರುವ ಮಹಿಳೆಯರಿಗಿದೊಂದು ಸಂತಸದ ಸುದ್ದಿ. ಇದೀಗ ಸೆಂಟ್ರಲ್ ಗೋರ್ಮೆಂಟ್ 18 ರಿಂದ 50 ವರ್ಷದ ಮಹಿಳೆಯರಿಗಾಗಿ ಬಿಮಾ ಸಖಿ ಯೋಜನೆ ಯನ್ನು ಜಾರಿಗೊಳಿಸಿದೆ. 10ನೇ ತರಗತಿ ಪೂರೈಸಿದ ಮಹಿಳೆಯರಿಗೆ ಈ ಯೋಜನೆ ಉದ್ಯೋಗಾವಕಾಶಗಳು ಮತ್ತು ಆರ್ಥಿಕ ಸ್ವಾವಲಂಬನೆಯನ್ನು ನೀಡಲು ಸಹಾಯಕವಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಯಾಗಿದೆ ಬಿಮಾ ಏಜೆಂಟ್‌ಗಳಾಗಿ ಮಹಿಳೆಯರಿಗೆ ತರಬೇತಿ ನೀಡಲಾಗುತ್ತದೆ.
ಪ್ರಾರಂಭದ ವರ್ಷದ ಸಮಯದಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 7,000 ರೂ. ಸಂಬಳ ನೀಡಲಾಗುತ್ತದೆ. ಎರಡನೇ ಮತ್ತು ಮೂರನೇ ವರ್ಷದಲ್ಲಿ ಅದು ಕ್ರಮವಾಗಿ 6,000 ರೂ. ಮತ್ತು 5,000 ರೂ.ಗೆ ಏರಿಕೆಯಾಗುತ್ತದೆ. ಜೊತೆಗೆ, ಈ ಯೋಜನೆಗೆ ಸಂಬಂಧಿಸಿದ ಉದ್ದೇಶಗಳನ್ನು ಪೂರ್ಣಗೊಳಿಸಿದವರಿಗೆ ಪ್ರೋತ್ಸಾಹಕ ಹಣರೂಪದಲ್ಲಿ 21,000 ರೂ.ವರೆಗೆ ಪ್ರೋತ್ಸಾಹವಾಗಿ ನೀಡಲಾಗುತ್ತದೆ.
ಬಿಮಾ ಸಖಿ ಯೋಜನೆಯ ಪ್ರಾರಂಭದ ಹಂತದಲ್ಲಿ 35,000 ಮಹಿಳೆಯರನ್ನು ನೇಮಿಸಲಾಗುತ್ತದೆ. ನಂತರದ ಹಂತಗಳಲ್ಲಿ ಈ ಸಂಖ್ಯೆಯನ್ನು 2 ಲಕ್ಷಕ್ಕೆ ಹೆಚ್ಚಿಸಲಾಗುತ್ತದೆ. ಇದು ಮಹಿಳೆಯರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಗ್ರಾಮೀಣ ಆರ್ಥಿಕತೆಯ ಚೈತನ್ಯವನ್ನು ಹೆಚ್ಚಿಸುತ್ತದೆ.
ಈ ಯೋಜನೆ ಮಹಿಳೆಯರಿಗೆ ಸ್ವಾಭಿಮಾನ ಮತ್ತು ಆರ್ಥಿಕ ಸ್ವಾಯತ್ತತೆಯನ್ನು ಒದಗಿಸಲು ಸಬಲೀಕರಣದ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ.