ಅಯೋಧ್ಯ: ಹಿಂದೂಗಳ ನೂರಾರು ವರ್ಷಗಳ ಹೋರಾಟ,ಕನಸು,ಕನವರಿಕೆಗಳಿಗೆ ಕಳೆದ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯೊಂದಿಗೆ ಬೆಲೆ ಸಿಕ್ಕಿತ್ತು. ಉದ್ಘಾಟನೆಯಾದ ವರ್ಷದಲ್ಲೇ ರಾಮಮಂದಿರ ಪ್ರವಾಸಿಗರ ಭೇಟಿಯಲ್ಲಿ ಇತಿಹಾಸ ನಿರ್ಮಿಸಿದೆ.
ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು ಎಂದು ಕರೆಯಲ್ಪಡುವ ತಾಜ್ ಮಹಲನ್ನು ರಾಮ ಮಂದಿರ ಹಿಂದಿಕ್ಕಿ ನಂ.1 ಸ್ಥಾನ ಅಲಂಕರಿಸಿದೆ.
13.5ಕೋ ಪ್ರವಾಸಿಗರ ಭೇಟಿ!
ಜಗತ್ತಿನ ಪ್ರಮುಖ ಪ್ರವಾಸಿ ಕೇಂದ್ರ ಎನಿಸಿಕೊಂಡಿರುವ ಆಗ್ರಾದಲ್ಲಿರುವ ತಾಜ್ ಮಹಲನ್ನು ಈ ಬಾರಿ ಪ್ರವಾಸಿಗರ ಭೇಟಿಯಲ್ಲಿ ರಾಮಮಂದಿರ ಹಿಂದಿಕ್ಕಿದೆ.ಪ್ರಸಕ್ತ ವರ್ಷದಲ್ಲಿ ತಾಜ್ ಮಹಲ್ ಗೆ 12.5ಕೋಟಿ ಪ್ರವಾಸಿಗರು ಭೇಟಿ ನೀಡಿದರೆ. ಅಯೋಧ್ಯೆಯ ರಾಮ ಮಂದಿರಕ್ಕೆ ಬರೋಬ್ಬರಿ 13.5 ಕೋಟಿ ಜನ ಭೇಟಿ ನೀಡಿದ್ದಾರೆ.
ಈ ಮೂಲಕ ತಾಜ್‌ಮಹಲ್ ದಾಖಲೆಯನ್ನು ರಾಮ ಮಂದಿರ ಹಿಂದಿಕ್ಕಿದೆ.
ಅಯೋಧ್ಯೆಯೆ ಆಕರ್ಷಣೆ ಏನು?
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕೋಟ್ಯಾಂತರ ಭಾರತೀಯರ ಕನಸಾಗಿತ್ತು. ಈ ಮಂದಿರ ಈ ವರ್ಷ ಉದ್ಘಾಟನೆಗೊಂಡ ಕಾರಣ ಈ ಬಾರಿ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ.
ಜೊತೆಗೆ ರಾಮಮಂದಿರ ಹಿಂದೂಗಳ ಪುಣ್ಯಕ್ಷೇತ್ರವಾಗಿರುವ ಕಾರಣ ಈ ಬಾರಿ ತಾಜ್ ಮಹಲ್ ಬದಿಗೆ ಸರಿದಿದೆ.