ರಿಪಬ್ಲಿಕ್ ಹಿಂದೂ:- ದೇಶದಲ್ಲಿ ಅನ್ಯ ಕೋಮಿನ ಜಿಹಾದಿಗಳ ಅಟ್ಟಹಾಸ ಎಲ್ಲೆ ಮೀರಿ ನಡೆಯುತ್ತಿದೆ. ಅದರಲ್ಲಿ ಲವ್ ಜಿಹಾದ್ ಕೂಡಾ ಒಂದು. ಪ್ರೀತಿ ವಿಷಯದಲ್ಲಿ ಮುಗ್ಧ ಹೆಣ್ಣು ಮಕ್ಕಳನ್ನು ನಂಬಿಸಿ ಬಲಿಪಶು ಮಾಡಿ ಜೀವನವನ್ನೇ ನರಕಕ್ಕೆ ದೂಡುವ ಪಿಪಾಸುಗಳಿಗೆ ಕಾನೂನಿನ ಭಯವೂ ಇಲ್ಲದಂತಾಗಿದೆ.
ಇಂತಹ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದರೂ ಹಿಂದೂ ಹೆಣ್ಣು ಮಕ್ಕಳು ಮಾತ್ರ ಜಿಹಾದಿಗಳ ಹಿಂದೆ ಹೋಗಿ ಜೀವನ ಹಾಳು ಮಾಡಿಕೊಳ್ಳುತ್ತಿರೋದು ವಿಪರ್ಯಾಸ.
ಇದೀಗ ಇಂತಹ ಪ್ರಕರಣಕ್ಕೆ ಬಲಿಯಾಗಿ ಯುವತಿಯೋರ್ವಳು ತನಗೆ ತಾನೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ನಡೆದಿದೆ.
ಫರಾಜ್ ನ ಕಿರುಕುಳಕ್ಕೆ ಬೇಸತ್ತು ಜೀವಾಂತ್ಯಗೊಳಿಸಿದ ಹಿಂದೂ ಯುವತಿ..!!
ಉತ್ತರಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಕವಿನಗರದ ಫರಾಜ್ ಅತ್ತಾರ್ ಎಂಬ ಮುಸ್ಲಿಂ ಯುವಕನು ಹಿಂದೂ ಯುವತಿಯೊಬ್ಬಳನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಹಲವು ಬಾರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೇ ಆಕೆಯನ್ನು ಬಲವಂತವಾಗಿ ಮತಾಂತರಿಸಿದ್ದಾನೆ.
ಯುವತಿಗೆ ದೈಹಿಕ, ಮಾನಸಿಕ ಹಾಗೂ ಆರ್ಥಿಕವಾಗಿಯೂ ಹಿಂಸೆ ನೀಡಿದ್ದನು. ಫರಾಜ್ ಆಕೆಯಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿ ವಂಚಿಸಿದ್ದನು.
ಇದೆಲ್ಲದರಿಂದ ಬೇಸತ್ತ ಯುವತಿ ಕೊನೆಗೆ ತನ್ನ ಮನೆಯಲ್ಲೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವತಿಯ ತಂದೆಯ ಹಣಕ್ಕೆ ಕಣ್ಣಿಟ್ಟಿದ್ದ ಖತರ್ನಾಕ್ ಯುವಕ..!
ಮೃತ ಯುವತಿಯ ತಂದೆ ಕೋಟ್ಯಾಧಿಪತಿಯಾಗಿದ್ದು ಅವರ ಆಸ್ತಿಯೆಲ್ಲ ಈ ಯುವತಿಯ ಹೆಸರಿನಲ್ಲಿತ್ತು. ಈ ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಫರಾಜ್ ಈ ಹಿಂದೂ ಯುವತಿಯನ್ನು ತನ್ನ ಪ್ರೀತಿಯ ಬಲೆಗೆ ಬೀಳಿಸಿದ್ದನು.
ನಾನು ಅವಿವಾಹಿತನೆಂದು ಹೇಳಿ ಆಕೆಗೆ ಮದುವೆಯ ಭರವಸೆ ನೀಡಿದ್ದನು. ಫರಾಜ್ ಯುವತಿಯ ಜೊತೆ ದೈಹಿಕ ಸಂಬಂಧ ಹೊಂದಿದ್ದನು. ಅನೇಕ ಬಾರಿ ಆಕೆಗೆ ಗರ್ಭಪಾತ ಕೂಡಾ ಮಾಡಿಸಿದ್ದನು.
ಅಲ್ಲದೇ ಯುವತಿಯನ್ನು ಮತಾಂತರಿಸಲು ಇಸ್ಲಾಂ ಪುಸ್ತಕವನ್ನು ಓದುವಂತೆ ಒತ್ತಾಯಿಸುತ್ತಿದ್ದನು. ಆಸ್ತಿಯೆಲ್ಲ ನನ್ನ ಹೆಸರಿಗೆ ಬಂದ ನಂತರವೇ ಮದುವೆಯಾಗುತ್ತೇನೆ ಎಂದು ಡಿಸೆಂಬರ್ 10ರಂದು ಆ ಹಿಂದೂ ಯುವತಿಗೆ ಷರತ್ತು ಹಾಕಿದ್ದನು.
ಇದರಿಂದ ಬೇಸತ್ತ ಯುವತಿ ಡಿಸೆಂಬರ್ 11ರಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಯುವತಿಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫರಾಜ್ ಅತ್ತಾರ ಹಾಗೂ ಆತನ ಸಂಬಂಧಿಕರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಒಟ್ಟಾರೆಯಾಗಿ ಈ ರೀತಿ ಮುಗ್ಧ ಹೆಣ್ಣು ಮಕ್ಕಳ ಜೀವನದಲ್ಲಿ ಚೆಲ್ಲಾಟವಾಡಿ ಅವರ ಬದುಕನ್ನು ನರಕಕ್ಕೆ ದೂಡುವ ಪಾಪಿಗಳಿಗೆ ಇನ್ನಾದರೂ ದೇಶದ ಕಾನೂನು ಕಠಿಣ ಕ್ರಮ ನೀಡಲೇಬೇಕು ಎಂಬುವುದು ನಮ್ಮ ಆಗ್ರಹ ಕೂಡಾ...