ಉತ್ತರ ಪ್ರದೇಶ: ಈಗಿನ ಕಾಲದಲ್ಲಿ ಜನ ಹಣಕ್ಕಾಗಿ ಏನು ಬೇಕಾದರೂ ಮಾಡ್ತಾರೆ ಅನ್ನೋದಕ್ಕೆ ಇದೇ ನೋಡಿ ಜ್ವಲಂತ ನಿದರ್ಶನ. ಈ ಖತರ್ನಾಕ್ ಲೇಡಿ ಮಾಡಿದ್ದು ಅಂತಿಂತ ಕೆಲಸವಲ್ಲ. ಹಣ ಮನುಷ್ಯನನ್ನು ಏನನ್ನು ಬೇಕಾದರೂ ಮಾಡಿಸುತ್ತೆ ಅನ್ನೋದು ಇದಕ್ಕೆ ನೋಡಿ.
ಈಕೆ ಹಣಕ್ಕಾಗಿ ಲೈಫಲ್ಲಿ ಮಾಡಿದ ಐಡಿಯಾ ಎಂಥವರನ್ನೂ ಬೆಚ್ಚಿ ಬೀಳಿಸುತ್ತೆ...ಒಮ್ಮೆ ಈ ಸ್ಟೋರಿ ನೋಡಿ...
ಮದ್ವೆಯಾಗಿ ಹಣ, ಆಭರಣ ದೋಚೋದೇ ಈಕೆಯ ಟಾರ್ಗೆಟ್...!!
ಹೌದು. ಈ ಖತರ್ನಾಕ್ ಲೇಡಿಯ ಕಥೆ ಕೇಳಿದ್ರೆ ಆಶ್ಚರ್ಯವಾಗೋದಂತೂ ಸತ್ಯ. 6 ಜನರನ್ನು ಮದುವೆಯಾಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮಹಿಳೆಗೆ ಉತ್ತರ ಪ್ರದೇಶದ ಪೊಲೀಸರು ಬಲೆ ಬೀಸಿದ್ದಾರೆ. ಏಳನೇ ಮದುವೆ ತಯಾರಿಯಲ್ಲಿದ್ದಾಗಲೇ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಬಂಧಿತ ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದೆ.
ಆಕೆಯ ತಾಯಿಯಂತೆ ಸಂಜನಾ ಗುಪ್ತಾ ಎಂಬಾಕೆ ನಟಿಸುತ್ತಿದ್ದಳು. ಈ ಇಬ್ಬರಿಗೂ ವಿಮಲೇಶ್ ವರ್ಮಾ ಮತ್ತು ಧರ್ಮೇಂದ್ರ ಪ್ರಜಾಪತಿ ಎಂಬವರು ಕೆಲ ಯುವಕರನ್ನು ಪರಿಚಯಿಸುತ್ತಿದ್ದರು. ಬಳಿಕ ಗ್ಯಾಂಗ್ ಯುವಕರಿಂದ ಹಣ ವಸೂಲಿ ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮದ್ವೆಯಾಗೋದು, ಹಣ- ಒಡವೆ ದೋಚಿ ಎಸ್ಕೇಪ್ ಆಗೋದೇ ಈಕೆಯ ಕೆಲ್ಸ....!!
ಪರಿಚಯಿಸಿದ ಯುವಕರ ಜೊತೆ ಸರಳ ವಿವಾಹವಾಗಿ ಪೂನಂ ಪತಿಯ ಮನೆಗೆ ತೆರಳುತ್ತಿದ್ದಳು. ಬಳಿಕ ಸಮಯ ಸಿಕ್ಕಾಗ ಹಣ ಹಾಗೂ ಚಿನ್ನ ದೋಚಿ ಆಕೆ ಅಲ್ಲಿಂದ ಎಸ್ಕೇಪ್ ಆಗುತ್ತಿದ್ದಳು. ಇದೇ ಕೆಲಸ ಅವಳಿಗೆ ಖಾಯಂ ಆಗಿತ್ತು. ಇದೇ ರೀತಿ 6 ಜನರನ್ನು ಮದ್ವೆಯಾಗಿ ಅವರಿಗೆ ವಂಚಿಸಿದ್ದಾಳೆ.
ಆರೋಪಿಗಳು ಏಳನೆಯದಾಗಿ ಶಂಕರ್ ಉಪಾಧ್ಯಾಯ ಎಂಬವರಿಗೆ ಪೂನಂಳನ್ನು ತೋರಿಸಿ ಮದುವೆ ವಿಚಾರವಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಂಕರ್‌ಗೆ ಅನುಮಾನ ಬಂದು ಪೂನಂ ಹಾಗೂ ಸಂಜನಾಳ ಆಧಾರ್ ಕಾರ್ಡ್ ಕೇಳಿದ್ದಾರೆ. ಈ ವೇಳೆ ಇವರ ಸಂಚು ಬೆಳಕಿಗೆ ಬಂದಿದೆ.
ಸಿಕ್ಕಿಬಿದ್ದ ಆರೋಪಿಗಳು ದಾರಿ ಕಾಣದೆ ಆರೋಪಿಗಳು ಆತನಿಗೆ ಕೊಲೆ ಬೆದರಿಕೆ ಹಾಕಿದ್ದಾರೆ. ಈ ಸಂದರ್ಭ ಶಂಕರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಹಿನ್ನೆಲೆ ಮೂವರನ್ನು ಬಂಧಿಸಲಾಗಿದೆ. ಆಗ ಇವರ ಮತ್ತಷ್ಟು ವಂಚನೆ ಪ್ರಕರಣಗಳು ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.