ಡಿಎಂಕೆ ಸರ್ಕಾರದ ವಿರುದ್ಧ ಮಹತ್ವದ ಶಪಥಗೈದ ಅಣ್ಣಾಮಲೈ!; ಕೈಯಲ್ಲಿ ಚಪ್ಪಲಿ ಹಿಡಿದು ತಮಿಳುನಾಡು ಬಿಜೆಪಿ ರಾಜಾಧ್ಯಕ್ಷ ಹೇಳಿದ್ದೇನು ಗೊತ್ತಾ?

  • 27 Dec 2024 11:59:28 AM

ಕೊಯಂಬತ್ತೂರು: ಹಿಂದೂ ಫೈರ್‌ಬ್ರಾಂಡ್, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮಿಳುನಾಡಿನ ಆಡಳಿತಪಕ್ಷ ಡಿಎಂಕೆ ವಿರುದ್ಧ ಬಹುದೊಡ್ಡ ಶಪಥಗೈದು ಬಾರೀ ಸುದ್ದಿಯಲ್ಲಿದ್ದಾರೆ.

 

ಸದ್ಯ, ಮಾಧ್ಯಮದ ಮುಂದೆ ಗರ್ಜಿಸುತ್ತಾ, ಕೈಯಲ್ಲಿ ಶೂ ಹಿಡಿದಿರುವ ಅಣ್ಣಾಮಲೈ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಈ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

 

ಏನಿದು ಅಣ್ಣಾಮಲೈ ಶಪಥ?

 

ಇತ್ತೀಚೆಗಷ್ಟೇ ತಮಿಳುನಾಡಿನ ಕೊಯಮತ್ತೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ ಕೈಯಲ್ಲಿ ಶೂ ಹಿಡಿದು, 'ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವ ತನಕ ನಾನು ಚಪ್ಪಲಿ ಧರಿಸುವುದಿಲ್ಲ. ಸದ್ಯದಲ್ಲೇ ಡಿಎಂಕೆ ಪಕ್ಷದ ಆಡಳಿತಕ್ಕೆ ಪೂರ್ಣ ವಿರಾಮ ಹಾಕುತ್ತೇನೆ'' ಎಂದು ಅಬ್ಬರಿಸಿದ್ದಾರೆ.ಅಣ್ಣಾಮಲೈ ಅವರ ಈ ಶಪಥಕ್ಕೆ ಬಲವಾದ ಕಾರಣವೂ ಇದೆ.

 

ಅಣ್ಣಾಮಲೈ ಶಪಥಕ್ಕೆ ಕಾರಣವೇನು?

 

ಇತ್ತೀಚೆಗಷ್ಟೇ ತಮಿಳುನಾಡಿನ ಅಣ್ಣಾ ವಿಶ್ವವಿದ್ಯಾನಿಲಯದಲ್ಲಿ ಯುವತಿಯೊಬ್ಬಳ ಮೇಲೆ ಲೈಂಗಿಕ ಕಿರುಕುಳ ನಡೆದಿತ್ತು.ಪ್ರಕರಣದಲ್ಲಿ ಆಡಳಿತ ಪಕ್ಷದ ಪ್ರಭಾವಿಯೊಬ್ಬನ ಮಗನ ಕೈವಾಡವಿದೆ ಎಂಬ ಮಾತುಗಳು ಕೂಡ ಕೇಳಿ‌ ಬಂದಿತ್ತು.

 

ಲೈಂಗಿಕ ಕಿರುಕುಳ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಎಪ್ಐಆರ್ ನಲ್ಲಿದ್ದ ಯುವತಿಯ ಖಾಸಗಿ ಮಾಹಿತಿ ಸೋರಿಕೆಯಾಗಿತ್ತು. ಇದಕ್ಕೆಲ್ಲ ಆಡಳಿತ ಪಕ್ಷವೇ ಕಾರಣ, ತಮಿಳುನಾಡಿನಲ್ಲಿ‌ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂಬ ಕಾರಣದಿಂದಲೇ ಸದ್ಯ, ಅಣ್ಣಾಮಲೈ ಆಡಳಿತ ಪಕ್ಷದ ವಿರುದ್ಧ ಹರಿಹಾಯುತ್ತಿದ್ದಾರೆ ಎಂದು ತಿಳಿದು ಬಂದಿದೆ.