ಆಂಧ್ರ ಪ್ರದೇಶ: ಗಂಡು-ಹೆಣ್ಣು ಪ್ರೀತಿಸುವುದು, ಮದುವೆಯಾಗುವುದು ಸಹಜ ಆದರೆ ಇಲ್ಲೊಬ್ಬ ಬಿಟೆಕ್ ಪದವೀಧರ ಮಂಗಳಮುಖಿಯೊಬ್ಬಳನ್ನು ಪ್ರೀತಿಸಿದ್ದಾನೆ. ಈ ಪ್ರೀತಿ ದಿನಕಳೆದಂತೆ ಬಹಳಷ್ಟು ಆಳಕ್ಕೆ ತೆರಳಿದ್ದು, ಅಂತಿಮವಾಗಿ ಈತ ತೃತೀಯಲಿಂಗಿಯನ್ನೇ ಮದುವೆಯಾಗುವುದಾಗಿ ಹಠ ಹಿಡಿದಿದ್ದಾನೆ. ಮಗನ ಈ ಅವಾಂತರ ಕಂಡು ಹೆತ್ತ ತಂದೆ-ತಾಯಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ಓದಿ.
ಘಟನೆಯ ವಿವರ?
ಆಂಧ್ರಪ್ರದೇಶದ ಮೂಲದ ಸುಬ್ಬ ರಾಯಡು ಹಾಗೂ ಸರಸ್ವತಿ ದಂಪತಿಯ ಏಕೈಕ ಪುತ್ರ ಸುನೀಲ್ ಎಂಬಾತ ಬಿಟೆಕ್ ಪೂರೈಸಿ ಆಟೋ ಓಡಿಸುತ್ತಿದ್ದ. ಈ ನಡುವೆ ಕಳೆದ ಮೂರು ವರ್ಷಗಳಿಂದ ಈತ ಸ್ಮಿತಾ ಎಂಬ ಮಂಗಳಮುಖಿಯೊಂದಿಗೆ ಸ್ನೇಹ ಬೆಳೆಸಿದ್ದ.
ಈ ಸ್ನೇಹ ದಿನಕಳೆದಂತೆ ಪ್ರೀತಿಗೆ ತಿರುಗಿದೆ. ಇತ್ತ ತಂದೆ-ತಾಯಿ ಮಗನ ಮದುವೆ ವಿಚಾರ ತೆಗೆದಾಗ ಸುನಿಲ್ ಮಂಗಳಮುಖಿಯೊಂದಿಗಿನ ಪ್ರೀತಿಯ ವಿಚಾರವನ್ನು ಹೆತ್ತವರಿಗೆ ತಿಳಿಸಿದ್ದಾನೆ.
ವಿಷ ಸೇವಿಸಿದ ಹೆತ್ತವರು!
ತಮಗಿರುವ ಏಕೈಕ ಮಗ ಮಂಗಳಮುಖಿಯೊಬ್ಬರನ್ನು ಪ್ರೀತಿಸುತ್ತಿದ್ದಾನೆ, ಮದುವೆಯಾಗುತ್ತಾನೆ ಎಂಬ ವಿಷಯ ಕೇಳಿ ಆಘಾತಕ್ಕೊಳಗಾದ ಹೆತ್ತವರು ಮಗನಿಗೆ ಬುದ್ದಿ ಹೇಳಿದ್ದಾರೆ. ಆದರೆ ಸುನೀಲ್ ಹೆತ್ತವರ ಮಾತು ಕೇಳದೆ ಹಠಕ್ಕೆ ಬಿದ್ದಿದ್ದಾನೆ. ಇದರಿಂದ ಮನನೊಂದ ಹೆತ್ತವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.