ಹೆಚ್ಚು ಮೊಬೈಲ್ ಬಳಸಬೇಡ ಎಂದ ತಾಯಿ!;ತಾಯಿಯ ಮಾತು ಕೇಳಿ ಹದಿಹರೆಯದ ಹುಡುಗಿ ಮಾಡಿದ್ದೇನು ಗೊತ್ತಾ?

  • 27 Dec 2024 03:49:14 PM

ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಹದಿಹರೆಯದ ಯುವಕ-ಯುವತಿಯರು ಅತಿಯಾದ ಮೊಬೈಲ್ ಗೀಳಿಗೆ ಸಿಲುಕಿರುವುದು ಹೊಸ ವಿಚಾರವೇನಲ್ಲ. ಸ್ವತಃ ತಂದೆ-ತಾಯ ಮಾತನ್ನೂ ಕೂಡ ಕೇಳದಷ್ಟರ ಮಟ್ಟಿಗೆ ಯುವಜನತೆಯನ್ನು ಮೊಬೈಲ್ ಕೈವಶ ಮಾಡಿಕೊಂಡಿದೆ. ಸದ್ಯ ನೀವು ಓದುತ್ತಿರವ ದುರಂತ ವರದಿಯಲ್ಲೂ ಕೂಡ ಮೊಬೈಲ್ ಗೀಳಿಗೆ ಬಿದ್ದು ಯುವತಿಯೊಬ್ಬಳು ಮಾಡಿಕೊಂಡ ಅವಾಂತರದ ಸುದ್ದಿಯಿದೆ. 'ಹೆಚ್ಚು ಮೊಬೈಲ್ ಬಳಸಬೇಡ' ಎಂದು ತಾಯಿ‌ ಹೇಳಿದ್ದಕ್ಕೆ ಈ ಯುವತಿ ಮಾಡಿದ್ದೇನು ಗೊತ್ತಾ?

 

ಮೊಬೈಲ್ ಬಳಕೆ ಕಡಿಮೆ‌ ಮಾಡು ಎಂದ ತಾಯಿ!

 

ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿ ಗ್ರಾಮದ ಧನುಶ್ರೀ (20ವ) ಎಂಬ ಯುವತಿ ಶಿವಮೊಗ್ಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಆದರೆ ಈಕೆ ಓದಿಗಿಂತ ಹೆಚ್ವು ಮೊಬೈಲ್ ಬಳಕೆಗೆ ಗಮನ ಕೊಡುತ್ತಿದ್ದಳು.

 

ರಾತ್ರಿ ಹಗಲು‌ ಮಗಳು ಮೊಬೈಲ್ ನಲ್ಲಿ ಮುಳುಗಿರುವುದನ್ನು ಕಂಡು ಬೇಸತ್ತ ತಾಯಿ 'ಮೊಬೈಕ್ ಬಳಕೆ ಕಡಿಮೆ ಮಾಡಿ ಓದಿನ ಕಡೆ ಹೆಚ್ಚು ಗಮನ ಕೊಡು' ಎಂದು ಬುದ್ದಿ ಮಾತು ಹೇಳಿದ್ದಾರೆ. 

 

ಯುವತಿ ಮಾಡಿದ್ದೇನು ಗೊತ್ತಾ?

 

ತಾಯಿಯ ಬುದ್ದಿ ಮಾತಿನಿಂದ ಮನನೊಂದ ಧನುಶ್ರೀ ಮೂರು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿದದ್ದಳು ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಸಾವನಪ್ಪಿದ್ದಾಳೆ ಎಂದು ತಿಳಿದು ಬಂದಿದೆ.

 

ಒಟ್ಟಾರೆಯಾಗಿ ಧನುಶ್ರೀ ಮೊಬೈಲ್ ಹುಚ್ಚಿಗೆ ಬಿದ್ದು ಜೀವವನ್ನೇ ಕಳೆದುಕೊಂಡಿರುವುದು ವಿಪರ್ಯಾಸವೇ ಸರಿ.