ಚಿಕ್ಕಮಂಗಳೂರು: ಚಿಕ್ಕಮಗಳೂರಿನ ದತ್ತಪೀಠದಲ್ಲಿ ಹೊಸದಾಗಿ ಗ್ಯಾರವಿ ಎಂಬ ಆಚರಣೆಗೆ ಅನುಮತಿ ನೀಡಿರುವುದರ ಕುರಿತಾಗಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ವಿರುದ್ಧ ಸಕಲೇಶಪುರದ ದತ್ತಪೀಠ ಮುಕ್ತಿ ಹೋರಾಟ ಸಮಿತಿಯವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ಯಾರವಿ ಆಚರಣೆಯು ಪ್ರಾಣಿಬಲಿಯನ್ನು ಒಳಗೊಂಡಿದ್ದು ದತ್ತಪೀಠದ ಹತ್ತಿರದಲ್ಲಿರುವ ಕಲ್ಯಾಣಿಯಲ್ಲಿ ಕುರಿ ಬಲಿ ನೀಡಿ, ಅಲ್ಲೇ ಮಾಂಸಾಹಾರ ಸೇವನೆ ಮಾಡಿದ್ದರಿಂದ ದತ್ತಪೀಠದ ಪವಿತ್ರತೆಯನ್ನು ಕಲುಷಿತ ಗೊಳಿಸಿರುವುದಾಗಿ ಸಮಿತಿಯವರು ಆರೋಪಿಸಿದ್ದಾರೆ.
ಕಾನೂನು ಹಾಗೂ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದೂ ದತ್ತಪೀಠದಲ್ಲಿ ಯಾವುದೇ ಮಾಂಸಾಹಾರ ಹಾಗೂ ಪ್ರಾಣಿಬಲಿ ಮಾಡಬಾರದೆಂದು ನ್ಯಾಯಾಲಯದ ಸ್ಪಷ್ಟ ಆದೇಶಮಾಡಿದ್ದರೂ ಕೂಡ ಜಿಲ್ಲಾಧಿಕಾರಿಯವರು ಗ್ಯಾರವಿ ಆಚರಣೆಗೆ ಅನುಮತಿ ನೀಡಿರುವುದು ಸರಿಯಲ್ಲ .
ವಿಶ್ವ ಹಿಂದೂ ಪರಿಷದ್ ಸೇರಿದಂತೆ ಅನೇಕ ಹಿಂದೂ ಸಂಘಟನೆಗಳು ಈ ಕುರಿತಂತೆ ತಕರಾರು ಸಲ್ಲಿಸಿದರೂ, ಅರ್ಜಿಯನ್ನು ಪರಿಗಣಿಸದೆ ಮುಸ್ಲಿಂ ಸಮುದಾಯದವರಿಗೆ ಗ್ಯಾರವಿ ಆಚರಣೆ ಮಾಡಲು ಅನುಮತಿ ನೀಡಿರುವುದು ಎಷ್ಟು ಸರಿ!??
ಹಿಂದೂ ಧಾರ್ಮಿಕ ಆಚರಣೆಗಳಿಗೆ ಸೂಕ್ತ ಮೂಲಭೂತ ಸೌಕರ್ಯ ಕಲ್ಪಿಸದ ಜಿಲ್ಲಾಧಿಕಾರಿಯರು, ಗ್ಯಾರವಿ ಆಚರಣೆಗೆ ಪ್ರೋತ್ಸಾಹ ನೀಡಿರುವುದು ಹಿಂದೂ ಧಾರ್ಮಿಕ ಭಾವನೆಗೆ ಹಾನಿ ಉಂಟುಮಾಡಿದೆ. ಈ ನಡೆಯು ಹಲವಾರು ಅನುಮಾನಗಳಿಗೆ ಕಾರಣವಾಗಿದೆ ಎಂಬುದಾಗಿ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಪ್ರಸ್ತಾಪಿಸಿದೆ.
ದತ್ತಪೀಠ ಮುಕ್ತಿ ಹೋರಾಟ ಸಮಿತಿಯ ಸದಸ್ಯರು ಮತ್ತು ಸಮಿತಿಯ ಸಂಚಾಲಕ ರಘು ಸಕಲೇಶಪುರ, ಶಿವು, ಮಂಜು ಕಬ್ಬಿನಗದ್ದೆ, ಕೌಶಿಕ್, ರವಿ ಹೆಬ್ಬಸಾಲೆ, ವಸಂತ್ ಶೆಟ್ಟಿಹಳ್ಳಿ, ಧರ್ಮೇಶ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿಯನ್ನ ಸಲ್ಲಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದಾರೆ.
ಈ ಮನವಿಯನ್ನು ಸಕಲೇಶಪುರ ಉಪವಿಭಾಗದ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರವಾನೆ ಮಾಡಲಾಗಿದೆ. ಜಿಲ್ಲಾಧಿಕಾರಿಯ ನಿರ್ಲಕ್ಷ್ಯ ಹಾಗೂ ಕಾನೂನು ಉಲ್ಲಂಘನೆಯ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳುವಂತೆ ಸಮಿತಿಯವರು ಒತ್ತಾಯಿಸಿದ್ದಾರೆ.