ಸಾಲೆತ್ತೂರು : ಹಿಂದೂ ಸಂಘಟನೆಯ ಕಾರ್ಯಕರ್ತ ಸದಾಶಿವ ಪೂಜಾರಿ ನಿಧನ: ಕುಟುಂಬಕ್ಕೆ ಅತ್ಮೀಯರಿಂದ ಬೆಂಬಲ

  • 24 Oct 2024 06:04:14 PM

ಕಾಸರಗೋಡು: ಮಂಜೇಶ್ವರ ತಾಲ್ಲೂಕಿನ ಪಾತೂರು ಎಂಬ ಪುಟ್ಟ ಗ್ರಾಮದಲ್ಲಿ ರಾಮ ಪೂಜಾರಿ ಮತ್ತು ಕಲ್ಯಾಣಿ ಎಂಬ ದಂಪತಿಗಳಿಗೆ ಜನಿಸಿದ ಸದಾಶಿವ ಪೂಜಾರಿ, ಹಲವಾರು ವರ್ಷಗಳಿಂದ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದರು. ಹಾಗೆಯೇ ಹಿಂದೂ ಸಂಘಟನೆಯ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಕಳೆದ ಒಂದು ವರ್ಷದಿಂದ ಅವರು ತೀವ್ರ ರಕ್ತಸ್ರಾವದ ಒತ್ತಡದಿಂದ ಬಳಲುತ್ತಿದ್ದರು.

 

 

ಅವರಿಗೆ ಮೂರು ಮಕ್ಕಳು ಇದ್ದಾರೆ. 17-10-2024 ರಂದು ಅವರು ದೈವ ದೀನರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆತ್ಮೀಯ ಬಂಧುಮಿತ್ರರು ಧನಸಾಯ ನೀಡಿದ್ದಾರೆ.

 

ಈ ದುಃಖದ ಸಂದರ್ಭದಲ್ಲಿ, ಎಲ್ಲ ಬಂಧುಗಳು ಮತ್ತು ಹಿಂದೂ ಸಂಘಟನೆ ಕೂಡೂರಸ್ತೆ ಬಂಟ್ವಾಳ ತಾಲೂಕು ಸಾಲೆತ್ತೂರು ತಮ್ಮ ಬೆಂಬಲ ಹಾಗೂ ಸಂತಾಪ ವ್ಯಕ್ತಪಡಿಸಿದ್ದಾರೆ.