ಉಡುಪಿ| ಸ್ಕೂಲ್ ಬಸ್ ಟೈರ್ ಸ್ಪೋಟಗೊಂಡು ಆಳೆತ್ತರಕ್ಕೆ ಹಾರಿ ಬಿದ್ದ ಯುವಕ!;ಫೋಟೋ ವೈರಲ್..

  • 28 Dec 2024 01:05:11 PM

ಕೋಟೇಶ್ವರ:ಉಡುಪಿ ಜಿಲ್ಲೆಯ ಕೋಟೇಶ್ವರದ ವಾಹನ‌ ದುರಸ್ತಿ ಅಂಗಡಿಯೊಂದರಲ್ಲಿ ಏಕಾಏಕಿ ಶಾಲಾ ವಾಹನದ ಟೈರ್ ಸ್ಪೋಟಗೊಂಡು ಯುವಕನೊಬ್ಬ ಗಾಯಗೊಂಡಿರುವ ಘಟನೆ ನಡೆದಿದೆ‌. ಟೈರ್ ಸ್ಪೋಟಗೊಂಡು ಭೀಕರತೆಗೆ ಯುವಕ ಆಳೆತ್ತರಕ್ಕೆ ಹಾರಿ ಬಿದ್ದಿದ್ದಾನೆ. ಘಟನೆ ಡಿ.24ರಂದು ನಡೆದಿದ್ದು, ಈ ಭಯಾನಕ ಘಟನೆಯ ಫೋಟೋ ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

 

ಗಾಳಿ ತುಂಬುವಾಗ ಟೈರ್ ಸ್ಪೋಟ!

 

ಉಡುಪಿಯ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಟೈರ್ ದುರಸ್ತಿ ಅಂಗಡಿಯಲ್ಲಿ ಟೈರ್ ಗಾಳಿ ತುಂಬುತ್ತಿದ್ದ ವೇಳೆ ಗಾಳಿಯ ಒತ್ತಡದಿಂದ ಏಕಾಏಕಿ ಟೈರ್ ಸ್ಪೋಟಗೊಂಡಿದೆ. ಈ ವೇಳೆ ಗಾಳಿ ತುಂಬುತ್ತಿದ್ದ 19ವರ್ಷದ ಯುವಕ ದಿಢೀರನೆ ಆಳೆತ್ತರಕ್ಕೆ ಹಾರಿ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಯುವಕನಿಗೆ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

 

ಗಂಭೀರವಾಗಿ ಗಾಯಗೊಂಡ ಯುವಕ!

 

ಶಾಲಾ ವಾಹನವೊಂದರ ದುರಸ್ತಿಗೆ ಬಂದಿದ್ದ ಟೈರ್ ಗೆ ಗಾಳಿ ತುಂಬಿಸುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ‌ . ಸ್ಪೋಟದ ಭೀಕರತೆಗೆ ಗಂಭೀರವಾಗಿ ಯುವಕ ಗಾಯಗೊಂಡಿದ್ದು, ಯುವಕನ ಕೈ ಮುರಿದಿದೆ ಎಂದು ತಿಳಿದು ಬಂದಿದೆ. ಸದ್ಯ, ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.