ಅಪ್ರಾಪ್ತೆಯ ಮೇಲೆರಗಿದ ಕಾಮಪಿಶಾಚಿ..!! ಯುವಕ ಸುಳ್ಯ ಪೊಲೀಸರ ವಶಕ್ಕೆ...!!

  • 28 Dec 2024 01:10:59 PM

ಸುಳ್ಯ: ದೇಶದ ಯಾವುದೋ ಮೂಲೆಯಲ್ಲಿ ನಡೆಯುತ್ತಿದ್ದ ಅತ್ಯಾಚಾರ ಪ್ರಕರಣಗಳ ಸುದ್ದಿಯನ್ನು ಕೇಳುತ್ತಿದ್ದೆವು. ಆದರೆ ಇದೀಗ ನಮ್ಮ ಹತ್ತಿರದ ಊರುಗಳಲ್ಲೇ, ಜಿಲ್ಲೆಗಳಲ್ಲೇ ಇಂತಹ ಪ್ರಕರಣಗಳು ವರದಿಯಾಗುತ್ತಿರುವುದು ನಿಜಕ್ಕೂ ಆತಂಕವನ್ನು ಸೃಷ್ಟಿಸುತ್ತಿದೆ.

 

ಇಷ್ಟೆಲ್ಲಾ ಆದರೂ ನರಸತ್ತ ರಾಜಕೀಯ, ಕಾನೂನು ವ್ಯವಸ್ಥೆ ಮಾತ್ರ ಹೆಣ್ಣು ಮಕ್ಕಳ ರಕ್ಷಣೆಗೆ ದಿಟ್ಟ, ಕಠಿಣ ನಿರ್ಧಾರವನ್ನು ಮಾತ್ರ ತೆಗೆದುಕೊಳ್ಳುತ್ತಿಲ್ಲ. ಇದೀಗ ದ.ಕ ಜಿಲ್ಲೆಯ ಸುಳ್ಯದಲ್ಲೊಂದು ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣವೊಂದು ದಾಖಲಾಗಿದೆ. 

 

 ಅಜ್ಜಾವರ ಬಾಲಕಿಯ ಮೇಲೆರಗಿದ ಕಾಮುಕ..!! 

 

ಅಜ್ಜಾವರದ ಅಪ್ರಾಪ್ತೆಯ ಜೊತೆಗೆ ಆಗಾಗ ಸಲುಗೆಯಿಂದ ವರ್ತಿಸುತ್ತಿದ್ದ ಯುವಕನೊಬ್ಬ ಅವಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಬೇಕಾದಂತೆ ಬಳಸಿಕೊಂಡಿದ್ದಾನೆ. ಈ ಘಟನೆ ನಡೆದ ಸಂದರ್ಭದಲ್ಲಿ ಬೆಳಕಿಗೆ ಬಂದಿರಲಿಲ್ಲ. ಈ ಪ್ರಕರಣ ತಡವಾಗಿ ಬಯಲಾಗಿದೆ. 

 

ಅಪ್ರಾಪ್ತೆ ಗರ್ಭಿಣಿ, ಮನೆಯವರು ಶಾಕ್...!!

 

ದಿನ ಕಳೆದಂತೆ ಬಾಲಕಿಯ ವರ್ತನೆಯಲ್ಲಿ ಮನೆಯವರು ಅನೇಕ ಬದಲಾವಣೆಗಳನ್ನು ಕಂಡಿದ್ದರು. ಹೀಗಿರುವಾಗ ಅವಳನ್ನು ಪ್ರಶ್ನೆ ಮಾಡಿದಾಗ ಅಚ್ಚರಿಕರ ವಿಷಯವೊಂದು ಬಯಲಾಗಿದೆ. ಅವಳು ಗರ್ಭಿಣಿಯಾಗಿರುವ ವಿಚಾರ ತಿಳಿದು ಹೆತ್ತವರು ಶಾಕ್ ಆಗಿದ್ದಾರೆ. ನಂತರ ಅವಳು ನೀಡಿದ ಹೇಳಿಕೆ ಆಧಾರದಲ್ಲಿ ಡಿ.೨೬ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಇದರ ತನಿಖೆ ಕೈಗೊಂಡಾಗ ಈ ಕಾಮಪಿಪಾಸು ಬಾಲಕಿಯ ಮನೆಯ ಹತ್ತಿರದ ಮನೆಯ ಯುವಕನೇ ಎಂದು ತಿಳಿದುಬಂದಿದೆ. ಇದೀಗ ಅವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.