ಅತ್ಯಾಚಾರದ ವಿರುದ್ಧ ತಮಗೆ ತಾವೇ ಛಾಟಿಯೇಟು ಹೊಡೆದುಕೊಂಡು ಪ್ರತಿಭಟಿಸಿದ ಸಿಂಗಂ ಅಣ್ಣಾಮಲೈ;!ಫೋಟೋ ಭಾರೀ ವೈರಲ್!

  • 28 Dec 2024 01:25:33 PM

ಕೊಯಂಬತ್ತೂರು: ದೇಶ ಇಂದು ಎಷ್ಟೇ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದರೂ ಕೂಡಾ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ವಿಷಯದಲ್ಲಿ ಮಾತ್ರ ದಾರಿ ತಪ್ಪುತ್ತಿದೆ. ದಿನದಿಂದ ದಿನಕ್ಕೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಲೇ ಇದೆ. ಕಾನೂನಿನ ಭಯವಿಲ್ಲದ ಕಾಮುಕ ವ್ಯಾಘ್ರಗಳು ಹೆಣ್ಣುಮಕ್ಕಳ ಮೇಲೆರಗುತ್ತಲೇ ಇದ್ದಾರೆ.

 

ಅವರನ್ನು ಕಠಿಣವಾಗಿ ಶಿಕ್ಷಿಸಬೇಕಾದ ನಮ್ಮ ದೇಶದ ಕಾನೂನು ಮಾತ್ರ ಮೌನವಾಗಿ ಕುಳಿತ್ತಿದೆ. ಇದೀಗ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ತಾವು ಕೈಗೊಂಡ ಶಪಥದ ಪ್ರಕಾರ ನಿನ್ನೆ ಚಾಟಿಯಿಂದ ತಮಗೆ ಹೊಡೆದುಕೊಳ್ಳುವ ಮೂಲಕ ಹೆಣ್ಣುಮಕ್ಕಳ ಲೈಂಗಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಿದರು. 

 

ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುತ್ತೇನೆಂದು ಶಪಥ ಮಾಡಿಕೊಂಡ ಅಣ್ಣಾಮಲೈ..!!

 

ಡಿಎಂಕೆ ಪಕ್ಷ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ತಮಗೆ ಹೇಗೆ ಬೇಕೋ ಹಾಗೆ ಕಾನೂನನ್ನು ತಿರುಚುತ್ತಿದೆ. ಪೊಲೀಸರನ್ನು ತಮ್ಮ ಕಪಿಮುಷ್ಠಿಯಲ್ಲಿಟ್ಟುಕೊಂಡು ಕಾನೂನನ್ನೇ ನಿಯಂತ್ರಿಸುತ್ತಿದ್ದಾರೆ. ಆದ್ದರಿಂದ ಡಿಎಂಕೆ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ಚಪ್ಪಲಿ ಧರಿಸುವುದಿಲ್ಲ. ಮತ್ತು ದಿನಕ್ಕೆ ಆರು ಛಡಿಯೇಟು ಹೊಡೆದುಕೊಳ್ಳುತ್ತೇನೆ ಎಂದು ಶಪಥ ಮಾಡಿಕೊಂಡಿದ್ದರು.

 

ಆ ಪ್ರಕಾರ ನಿನ್ನೆ ಅವರ ಮನೆಯ ಮುಂದೆ ತಮಗೆ ತಾವೇ ಛಾಟಿಯಿಂದ ಹೊಡೆದುಕೊಂಡು ನೋವನ್ನು ಅನುಭವಿಸಿದ್ದಾರೆ. ಪ್ರಮಾಣ ಮಾಡಿದ ನಂತರ ಅವರು ಪಾದರಕ್ಷೆಯನ್ನು ಕೂಡಾ ಬಳಸಿಲ್ಲ. ಒಟ್ಟಾರೆಯಾಗಿ ಇವರು ಚಾಟಿಯೇಟು ಮಾಡಿಕೊಳ್ಳುವ ಫೋಟೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ. 

 

ವಿದ್ಯಾರ್ಥಿನಿ ಸಾಮೂಹಿಕ ಅತ್ಯಾಚಾರಕ್ಕೆ ನ್ಯಾಯ ಸಿಗುವವರೆಗೂ ಉಪವಾಸ..!

 

ಅಣ್ಣಾ ಯುನಿವರ್ಸಿಟಿಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ಕಾಲೇಜು ಕ್ಯಾಂಪಸ್ ನಲ್ಲಿ ನಡೆಸಿರುವ ಸಾಮೂಹಿಕ ಅತ್ಯಾಚಾರ ಕೃತ್ಯದ ಆರೋಪಿಗೆ ಡಿಎಂಕೆ ಪಕ್ಷವೇ ರಕ್ಷಣೆಯನ್ನು ನೀಡುತ್ತಿದೆ. ಈ ಪ್ರಕರಣದ ಪ್ರಮುಖ ಆರೋಪಿ ಜ್ಞಾನಶೇಖರನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು.

 

ಈತ ಯುವತಿಯ ಖಾಸಗಿ ಕ್ಷಣದ ವೀಡಿಯೋ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡಿ ಅತ್ಯಾಚಾರ ಮಾಡಿದ್ದಾನೆ. ಈತನ ವಿರುದ್ಧ ಒಂದಲ್ಲ ಎರಡಲ್ಲ ಒಟ್ಟು ಹದಿನೇಳು ಪ್ರಕರಣ ಈ ಮೊದಲೇ ದಾಖಲಾಗಿದೆ. ಆದರೆ ಈತ ಸ್ವತಂತ್ರವಾಗಿ ಓಡಾಡುತ್ತಿದ್ದಾನೆ.‌ಅಧಿಕಾರದಲ್ಲಿರುವ ಪಕ್ಷದಿಂದ ಸಾಮಾನ್ಯ ವಿದ್ಯಾರ್ಥಿಗೂ ಇಲ್ಲಿ ಭದ್ರತೆಯಿಲ್ಲ. ಈ ಪ್ರಕರಣಕ್ಕೆ ಸೂಕ್ತ ನ್ಯಾಯ ಸಿಗಬೇಕು.

 

ಈ ಪಕ್ಷ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸಿ ತಮಿಳುನಾಡಿನ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಕೆ. ಅಣ್ಣಾಮಲೈ ಅವರು ನಲ್ವತ್ತೆಂಟು ದಿನಗಳ ಉಪವಾಸವನ್ನು ಕೈಗೊಂಡಿದ್ದಾರೆ. ಇದು ಪೂರ್ಣಗೊಂಡ ಬಳಿಕ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ದರ್ಶನ ಪಡೆಯುವ ಯೋಜನೆಯಿದೆ ಎಂದು ತಿಳಿಸಿದ್ದಾರೆ.