ಪುತ್ತೂರು: ನಾವು ವಾಹನವನ್ನು ಚಲಾಯಿಸುವಾಗ ಸೂಕ್ತವಾದ ರಸ್ತೆ ನಿಯಮಗಳನ್ನು ಪಾಲಿಸದೆ ಎಚ್ಚರಿಕೆ ವಹಿಸದಿದ್ದರೆ ನಮಗೆ ನಾವೇ ಅಪಾಯಗಳನ್ನು ಆಹ್ವಾನಿಸುವುದಂತೂ ಸತ್ಯ...ಜನರು ತರಾತುರಿಯಲ್ಲಿ ಹೆಲ್ಮೆಟ್ ಧರಿಸದೆ, ವೇಗದ ಚಾಲನೆಯಿಂದಾಗಿಯೋ ಅಪಘಾತಕ್ಕೆ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಾರೆ. ಇದೀಗ ದ.ಕ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಭೀಕರ ಅಪಘಾತ ಪ್ರಕರಣ ಮೂವರನ್ನು ಬಲಿ ತೆಗೆದುಕೊಂಡಿದೆ.
ಹೊಂಡಕ್ಕೆ ಉರುಳಿ ಬಿದ್ದ ಕಾರು, ಮೂವರು ಸ್ಪಾಟ್ ಡೆತ್...!!
ಬೈಪಾಸ್ ರಸ್ತೆಯ ಪರ್ಲಡ್ಕ ಜಂಕ್ಷನ್ ಬಳಿಯ ಬೈಪಾಸ್ ರಸ್ತೆಯಲ್ಲಿ ಕಾರೊಂದು ಹೊಂಡಕ್ಕೆ ಉರುಳಿ ಬಿದ್ದಿದ್ದು ಮೂವರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ಮೂವರೂ ದುರ್ದೈವಿಗಳು ಸುಳ್ಯ ಮೂಲದವರು ಎಂದು ಗುರುತಿಸಲಾಗಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಜನ ಜಮಾಯಿಸಿದ್ದಾರೆ. ಪೊಲೀಸರು ಸ್ಥಳದಲ್ಲಿ ಬಂದೋಬಸ್ತ್ ನಡೆಸಿದ್ದು ಮುಂಜಾನೆ ವೇಳೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಅಪಘಾತ ಮುಂಜಾನೆ ವೇಳೆ ಸಂಭವಿಸಿದರಿಂದ ಈ ಘಟನೆಗೆ ನಿಖರವಾದ ಕಾರಣ ತಿಳುದುಬಂದಿಲ್ಲ. ಕಾರಿನಲ್ಲಿದ್ದ ಮೂವರೂ ಕೂಡಾ ಅಪಘಾತದಲ್ಲಿ ಮೃತಪಟ್ಟಿದ್ದು ಅವರು ಸುಳ್ಯ ಮೂಲದವರು ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.