ಆಂಧ್ರ ಪ್ರದೇಶ: ಇನ್ನೇನೋ ಹೊಸ ವರ್ಷ ಸಮೀಪಿಸುತ್ತಿದೆ. ಮಕರ ಸಂಕ್ರಮಣಕ್ಕೆ ದಿನಗಣನೆ ಶುರುವಾಗಿದೆ. ಅಯ್ಯಪ್ಪ ಭಕ್ತರು ಮಾಲಾಧಾರಿಗಳಾಗಿ ವೃತಾಚರಣೆ ನಡೆಸಿ ಶಬರಿಮಲೆಗೆ ತೆರಳುವ ಸೀಸನ್ ಇದಾಗಿದ್ದು ಅಯ್ಯಪ್ಪ ಭಕ್ತರು ಶಬರಿಮಲೆಗೆ ತೆರಳುತ್ತಿದ್ದಾರೆ. ಈ ಮಧ್ಯೆ ಇದೀಗ ಅನ್ಯಕೋಮಿನ ಯುವಕನೋರ್ವ ಅಯ್ಯಪ್ಪ ಮಾಲಾಧಾರಿಗೆ ಕಿರಿಕ್ ನಡೆಸಿದ್ದಾನೆ.
ಮಾಲಾಧಾರಿ ಮೇಲೆ ಹಲ್ಲೆ ಮಾಡಿ ಮಾಲೆಯನ್ನೇ ಕಿತ್ತೆಸೆದ ಕಿರಾತಕ..!
ಆಂಧ್ರ ಪ್ರದೇಶದಲ್ಲಿ ಕ್ಷುಲ್ಲಕ ವಿಚಾರಕ್ಕೆ ದುಷ್ಕರ್ಮಿಯೋರ್ವ ಅಯ್ಯಪ್ಪ ಸ್ವಾಮಿ ಮಾಲಾಧಾರಿಯ ಮೇಲೆ ಹಲ್ಲೆ ಮಾಡಿದ್ದು, ಮಾತ್ರವಲ್ಲದೇ ಪವಿತ್ರ ಮಾಲೆಯನ್ನು ಕಿತ್ತು ಹಾಕಿ ಪುಂಡಾಟ ಮೆರೆದಿದ್ದ. ಈ ವಿಚಾರ ಹಿಂದೂ ಪರ ಸಂಘಟನೆಗಳ ಆಕ್ರೋಶಕ್ಕೆ ಕಿಡಿ ಹೊತ್ತಿಸಿತ್ತು.
ಆಂಧ್ರ ಪ್ರದೇಶದ ಮದನಪಲ್ಲಿ ಬಸ್ ನಿಲ್ದಾಣದಲ್ಲಿ ಡಿಸೆಂಬರ್ 25ರಂದು ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಮಾಲಾಧಾರಿಯನ್ನು ವೆಂಕಟೇಶ್ ಎಂದು ಗುರುತಿಸಲಾಗಿದ್ದು, ದಾಳಿ ಮಾಡಿದ ದುಷ್ಕರ್ಮಿಯನ್ನು ಕರ್ನಾಟಕದ ಬೀದರ್ ಮೂಲದ ಜಿಯಾವುಲ್ ಹಕ್ ಎಂದು ಗುರುತಿಸಲಾಗಿದೆ.
ನಡೆದ ಘಟನೆ ಏನು..?
ಡಿಸೆಂಬರ್ 25ರಂದು ಮದನಪಲ್ಲಿ ಬಸ್ ನಿಲ್ದಾಣದ ಬಳಿ ಆರೋಪಿ ಜಿಯಾ ಉಲ್ ಹಕ್ ರಸ್ತೆಗೆ ಅಡ್ಡಲಾಗಿ ತನ್ನ ದ್ವಿಚಕ್ರವಾಹನವನ್ನು ನಿಲ್ಲಿಸಿದ್ದ. ಇದರಿಂದ ದಾರಿಯಲ್ಲಿ ಸಂಚರಿಸುತ್ತಿದ್ದ ಇತರೆ ವಾಹನ ಸವಾರರಿಗೆ ತೊಂದರೆಯಾಗಿತ್ತು. ಇದನ್ನು ಪ್ರಶ್ನೆ ಮಾಡಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿ ವೆಂಕಟೇಶ್ ದ್ವಿಚಕ್ರವಾಹನವನ್ನು ಸ್ವಲ್ಪ ಪಕ್ಕಕ್ಕೆ ಸರಿಸುವಂತೆ ವಿನಯತೆಯಿಂದ ಕೇಳಿಕೊಂಡಿದ್ದಾರೆ.
ಈ ವೇಳೆ ಜಿಯಾವುಲ್ ಹಕ್ ನಿರ್ಲಕ್ಷ್ಯವಾಗಿ ಉತ್ತರಿಸಿದ್ದು ದರ್ಪ ತೋರಿಸಿದ್ದಾನೆ. ಅಲ್ಲದೇ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಎಂದೂ ಕೂಡ ನೋಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಗಲಾಟೆ ಏರ್ಪಟ್ಟಿದ್ದು, ಜಿಯಾ ಉಲ್ ಹಕ್ ಸಂತ್ರಸ್ಥ ವೆಂಕಟೇಶ್ ಮೇಲೆ ಹಲ್ಲೆ ಮಾಡಿ ಅವರು ಧರಿಸಿದ್ದ ಪವಿತ್ರ ಮಾಲೆಯನ್ನು ಕಿತ್ತು ಬಿಸಾಡಿದ್ದಾನೆ. ಸ್ಥಳೀಯರು ಈ ಜಗಳವನ್ನು ಬಿಡಿಸಲು ಅದೆಷ್ಟೇ ಯತ್ನಿಸಿದರೂ ಕೂಡಾ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಮೇಲೆ ಮಾಡಿದ ಹಲ್ಲೆ ವಿಚಾರ ಕಾಡ್ಗಿಚ್ಚಿನಂತೆ ಹರಡಿ ಹಿಂದೂಪರ ಸಂಘಟನೆಗಳು ಮತ್ತು ಇತರೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಸಿಡಿದೇಳುವಂತೆ ಮಾಡಿದೆ. ಈ ಘಟನೆಯ ಬಗ್ಗೆ ವ್ಯಾಪಕವಾದ ಆಕ್ರೋಶ ಕೇಳಿಬಂದಿದೆ.
ಆರೋಪಿ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಮಾಡಿದ ಹಿಂದೂಪರ ಸಂಘಟನೆಗಳು..!!
ಘಟನೆ ಬಗ್ಗೆ ಮತ್ತು ಆರೋಪಿಯ ಬಗ್ಗೆ ಕೆಂಡಾಮಂಡಲರಾದ ಹಿಂದೂಪರ ಸಂಘಟನೆ ಮತ್ತು ಸ್ಥಳದಲ್ಲಿ ನೆರೆದಿದ್ದ ಇತರ ಅಯ್ಯಪ್ಪ ಮಾಲಾಧಾರಿಗಳು ಸಾರ್ವಜನಿಕವಾಗಿ ಜಿಯಾವುಲ್ ಹಕ್ ನಿಂದ ಸಂತ್ರಸ್ಥ ಅಯ್ಯಪ್ಪ ಸ್ವಾಮಿ ಮಾಲಾಧಾರಿ ವೆಂಕಟೇಶ್ ಕಾಲಿಗೆ ಬಿದ್ದು ಕ್ಷಮೆಯಾಚಿಸುವಂತೆ ಮಾಡಿದ್ದಾರೆ.
ಆತ ಕಾಲಿಗೆ ಬಿದ್ದು ತಪ್ಪನ್ನು ಮನ್ನಿಸುವಂತೆ ಕ್ಷಮೆಯಾಚಿಸಿದ್ದಾನೆ. ಆ ಮೂಲಕ ಈ ಪ್ರದೇಶದಲ್ಲಿ ಯಾವುದೇ ರೀತಿಯ ಕೋಮು ಸಂಘರ್ಷ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಘಟನೆಯ ಗಂಭೀರತೆಯ ಬಗ್ಗೆ ಅರಿತ ಪೊಲೀಸರು ಕಾರ್ಯಾಚರಣೆ ನಡೆಸಿ ಬಿಹಾರ ಮೂಲದ ದುಷ್ಕರ್ಮಿ ಜಿಯಾ ಉಲ್ ಹಕ್ ನನ್ನು ಅರೆಸ್ಟ್ ಮಾಡಿದ್ದಾರೆ.