ಕಾಂಗ್ರೆಸ್ ಬ್ಯಾನರ್ ನಲ್ಲಿ ಕಾಶ್ಮೀರ ನಾಪತ್ತೆ!! ಬಿಜೆಪಿ ವಾಗ್ದಾಳಿ!! ಹಿಂದೂ ಕಾರ್ಯಕರ್ತರ ತೀವ್ರ ಆಕ್ರೋಶ!!

  • 28 Dec 2024 06:49:10 PM

ಬೆಂಗಳೂರು: ಗಾಂಧಿ ನೇತೃತ್ವದಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಮೂರನೇ ವರ್ಷಾಚರಣೆ ಅಂಗವಾಗಿ ಕಾಂಗ್ರೆಸ್ ಬೃಹತ್ ಸಮಾವೇಶವನ್ನು ಆಯೋಜಿಸಿತ್ತು. ಆದರೆ ಆ ಸಮಾವೇಶಕ್ಕಾಗಿ ಬೆಳಗಾವಿಯಲ್ಲಿ ಹಾಕಿರುವ ಕೆಲವು ಬ್ಯಾನರ್‌ಗಳಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿರುವುದು ಕಂಡುಬಂದಿದ್ದು, ಈ ವಿಚಾರದಲ್ಲಿ ರಾಜ್ಯ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

 

 

ಕಾಂಗ್ರೆಸ್‌ ಏರ್ಪಡಿಸಿದ ‘ಗಾಂಧಿ ಭಾರತ’ ಕಾರ್ಯಕ್ರಮದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿದೆ. ಇದರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಗೈರು ಎಂಬುದು ಬಿಜೆಪಿ ಆಕ್ಷೇಪವಾಗಿದೆ.

 

ಬಿಜೆಪಿಯ ಟ್ವೀಟ್:

ಈ ಕುರಿತು ರಾಜ್ಯ ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಅಕೌಂಟ್‌ನಲ್ಲಿ, ಕರ್ನಾಟಕದ ಕಾಂಗ್ರೆಸ್ ಪಾಕ್ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಧಾರೆ ಎರೆದು ಕೊಟ್ಟಿದೆ ಎಂದೂ. ‘ಗಾಂಧಿ ಭಾರತ’ ಹೆಸರಿನಲ್ಲಿ ಭಾರತದ ನಕ್ಷೆಯನ್ನು ತಿರುಚಿರುವುದು ನಿಜಕ್ಕೂ ದೇಶದ್ರೋಹ. ಇದನ್ನು ಕಂಡರೆ ತಿಳಿಯುತ್ತದೆ ಕಾಂಗ್ರೆಸ್ ಯಾವುದೇ ಹೀನ ಕೆಲಸಕ್ಕೂ ಇಳಿಯಲು ಸಿದ್ಧರು ಎಂದು ಆರೋಪವನ್ನು ಮಾಡಿದೆ .ಅದಲ್ಲದೆ, ಈ ವಿವಾದಾತ್ಮಕ ಬ್ಯಾನರ್‌ಗಳನ್ನು ತಕ್ಷಣವೇ ತೆರವುಗೊಳಿಸಿ, ಈ ಕೃತ್ಯದಲ್ಲಿ ತೊಡಗಿಸಿಕೊಂಡವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಒತ್ತಾಯಿಸಿದೆ.

 

 

ಜೆಡಿಎಸ್‌ ಕೂಡ ಈ ವಿಷಯದಲ್ಲಿ ಕಿಡಿಕಾರಿದ್ದು, “ಬೆಳಗಾವಿಯಲ್ಲಿ ‘ಗಾಂಧಿ ಭಾರತ’ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಕಾಶ್ಮೀರವನ್ನು ಕೈಬಿಟ್ಟಿರುವುದು ಇಟಲಿ ಕಾಂಗ್ರೆಸ್‌ನ ಮಜಲು ಮನೋಭಾವದ ಉದಾಹರಣೆಯಾಗಿದೆ. ದೇಶದ ನಕ್ಷೆಯನ್ನು ತಿರುಚುವುದು ಗಂಭೀರ ಅಪರಾಧ. ಈ ಕೃತ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇರ ಹೊಣೆಗಾರರು” ಎಂದು ಆರೋಪಿಸಿದೆ.

 

ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂಬುದನ್ನು ಮರೆತು, ಕಾಂಗ್ರೆಸ್ ದೇಶದ್ರೋಹದ ಮನೋಭಾವವನ್ನು ಈ ಬ್ಯಾನರ್‌ಗಳಿಂದ ಪ್ರದರ್ಶಿಸಿದೆ ಎಂದು ಬಿಜೆಪಿ ಮತ್ತು ಜೆಡಿಎಸ್ ಆರೋಪಿಸುತ್ತಿವೆ. ಈ ವಿವಾದದ ನಡುವೆಯೇ, ಕಾಂಗ್ರೆಸ್ ಈ ಕುರಿತು ಸ್ಪಷ್ಟನೆ ನೀಡಲು ತಯಾರಾಗಿದೆಯೇ ಎಂಬುದು ಕುತೂಹಲಕರಿಯಾದ ವಿಷಯ.