ಬೆಳ್ತಂಗಡಿ: ಶ್ರೀ ಧನ್ವಂತರಿ ಕ್ಷೇತ್ರ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನ ಕೊಕ್ಕಡದ ಪ್ರಮುಖ ಆಕರ್ಷಣೆಯಾದ ಶ್ಯಾಮ ಬಸವ (ನಂದಿ) ಇಂದು ಅಲ್ಪಕಾಲದ ಅನಾರೋಗ್ಯದಿಂದ ಹಲ್ಲಿಂಗೇರಿ ಗೋಶಾಲೆಯಲ್ಲಿ ದೇವರ ಪಾದ ಸೇರಿದ್ದಾನೆ. ಕಳೆದ 15 ವರ್ಷಗಳಿಂದ ದೇವಸ್ಥಾನದ ಜಾತ್ರೆಗಳಲ್ಲಿ ಶ್ಯಾಮನ ಸೇವೆಯು ವಿಶೇಷ ಪಾತ್ರ ವಹಿಸಿತ್ತು.
ಪುರುಷೋತ್ತಮ ಟೈಲರ್ ಮಡ್ಯಾಳಗುಂಡಿ ಅವರು ಈ ಬಸವನ ಆರೈಕೆಯನ್ನು ಅನೇಕ ವರ್ಷಗಳಿಂದ ಶ್ರದ್ಧೆಯಿಂದ ತೊಡಗಿಸಿಕೊಂಡಿದ್ದರು.
ಕಳೆದ 7 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಕಾಮಧೇನು ಗೋಶಾಲೆಯಲ್ಲಿ ಶ್ಯಾಮನ ಆರೈಕೆ ಮಾಡಲಾಗುತ್ತಿತ್ತು.ಆದರೆ ಇಂದು ಶ್ಯಾಮನ ನಿಧನವು ಭಕ್ತರು ಮತ್ತು ಗೋಶಾಲೆಯ ಸಿಬ್ಬಂದಿ ಬೇಸರವನ್ನುಂಟು ಮಾಡಿದೆ.
ಇವನ ಧಾರ್ಮಿಕ ಸೇವೆ ಹಾಗೂ ಭಕ್ತಾದಿಗಳೊಂದಿಗೆ ಹೊಂದಿದ್ದ ಆತ್ಮೀಯ ಬಾಂಧವ್ಯ ಎಂದಿಗೂ ಮರೆಯಲಾಗುವಂತಹದ್ದಲ್ಲ.