ಬೆಳ್ತಂಗಡಿ : ಇಂದಿನ ದಿನ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯಲ್ಲಿ ನಡೆಯ ಬೇಕಿದ್ದ ಪ್ರತಿಭಟನಾ ಸಭೆಯನ್ನು ಪೂಲೀಸರ 1 ವಾರದ ಕಾಲಾವಕಾಶದ ಮನವಿಯ ಹಿನ್ನಲೆಯಲ್ಲಿ ಮುಂದೂಡಲಾಗಿದೆ.
ಒಂದು ವಾರದ ಸಮಯವಕಾಶವನ್ನು ಕೇಳಿ ಆರೋಪಿಗಳನ್ನು ಕೂಡಲೇ ಬಂದಿಸುತ್ತೇವೆ ಎಂದು ಭರವಸೆ ನೀಡಿದ ಕಾರಣ ನಾಳೆ ನಡೆಯಬೇಕಾಗಿದ್ದ ಪ್ರತಿಭಟನಾ ಸಭೆಯನ್ನು ಒಂದು ವಾರದ ಮಟ್ಟಿಗೆ ಮುಂದೂಡಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ.
ಪೋಲಿಸರು ಹೇಳಿದ ಮಾತಿಗೆ ತಪ್ಪಿದಲ್ಲಿ ಮುಂದಿನ ದಿನ ಬೃಹತ್ ಕಕ್ಕಿಂಜೆ ಚಲೋ ಮಾಡಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ತಿಳಿಸಲಾಗಿದೆ.