ಮಂಡ್ಯ: ಇತ್ತೀಚಿನ ದಿನಗಳಲ್ಲಿ ಪ್ರೀತಿ, ಪ್ರೇಮ ಅನ್ನುವಂತದ್ದು ಬೇರೆ ಬೇರೆ ಸ್ವರೂಪಗಳನ್ನು ಪಡೆದುಕೊಂಡು ಬದುಕಿನ ದಾರಿಯನ್ನೇ ಅಲ್ಲೋಲಕಲ್ಲೋಲ ಮಾಡುತ್ತಿದೆ. ಪ್ರೀತಿಯ ಬಲೆಗೆ ಬಿದ್ದು ಅದೆಷ್ಟೋ ಯುವ ತರುಣರು, ತರುಣಿಯರು ತಮ್ಮ ಬದುಕನ್ನೇ ಬಲಿ ಕೊಟ್ಟು ಜೀವನದ ಪಯಣಕ್ಕೆ ತಿಲಾಂಜಲಿಯನ್ನಿಡುತ್ತಿದ್ದಾರೆ. ಇದೀಗ ಅಂತಹುದೇ ಮನ ಕಲಕುವ ಘಟನೆಯೊಂದು ನಡೆದಿದೆ.
ಪ್ರೀತಿಸಿದವಳು ದೂರಾದಳೆಂದು ಆಕೆಯ ಮನೆ ಮುಂದೆಯೇ ಜೀವಾಂತ್ಯಗೊಳಿಸಿದ ಭೂಪ..!!
ಹೌದು. ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ ಯುವಕನೋರ್ವ ತಾನೇ ಆತ್ಮಹತ್ಯೆ ಮಾಡಿಕೊಂಡು ದಾರುಣವಾಗಿ ಮೃತಪಟ್ಟಿದ್ದಾನೆ. ಮಂಡ್ಯ ಜಿಲ್ಲೆಯ ನಾಗಮಂಗಲದ ಬಸವೇಶ್ವರ ನಗರದ ರಾಮಚಂದ್ರ ಎಂಬ ಯುವಕ ಕಾಳೇನಹಳ್ಳಿಯ ಅಪ್ರಾಪ್ತೆಯೋರ್ವಳೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ. ಇಬ್ಬರೂ ಮನೆ ಬಿಟ್ಟು ಓಡಿ ಹೋಗಿದ್ದರು ಕೂಡಾ. ಆ ಸಂದರ್ಭ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇಷ್ಟಕ್ಕೆ ಸುಮ್ಮನಿರದ ಯುವಕ ತಾನು ಪ್ರೀತಿಸಿದ ಹುಡುಗಿ ಸಿಕ್ಕಿಲ್ಲವೆಂದು ತಪ್ಪು ನಿರ್ಧಾರಗಳನ್ನು ತೆಗೆದುಕೊಂಡಿದ್ದಾನೆ.
ಬಂಡೆಗಳನ್ನು ಸಿಡಿಸುವ ಜಿಲೆಟಿನ್ ಸ್ಫೋಟಿಸಿ ಯುವಕ ದಾರುಣ ಅಂತ್ಯ...!!
ಮನೆಯವರ ವಿರೋಧದ ಮಧ್ಯೆ ತಾನು ಪ್ರೀತಿಸಿದ ಹುಡುಗಿ ಸಿಗಲ್ಲ ಎಂಬ ವಿಚಾರಕ್ಕೆ ಮನ ಕರಗಿ ದುಡುಕಿನ ನಿರ್ಧಾರಗಳನ್ನು ತೆಗೆದುಕೊಂಡಿದ್ದಾನೆ. ಶನಿವಾರ ರಾತ್ರಿ ಯುವಕ ಬಾಲಕನ ಮನೆ ಬಳಿ ಹೋಗಿದ್ದ. ಬಂಡೆಗಳನ್ನು ಸಿಡಿಸುವ ಜಿಲೆಟಿನ್ ಹಿಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದು ಸಿಡಿದ ಪರಿಣಾಮವಾಗಿ ಆತನ ದೇಹ ಛಿದ್ರಛಿದ್ರವಾಗಿದೆ. ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.