ಸರ್ಕಾರಿ ಬಸ್ ಮತ್ತು ಕಾರು ಮುಖಾಮುಖಿ ಢಿಕ್ಕಿ...ದುರಂತ ಅಂತ್ಯ ಕಂಡ ಇಬ್ಬರು ಮಕ್ಕಳು..!! ಐವರು ಗಂಭೀರ..!!

  • 31 Dec 2024 02:15:28 PM

ಕಾಸರಗೋಡು: ಇತ್ತೀಚಿನ ದಿನಗಳಲ್ಲಿ ಅಪಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರಸ್ತೆ ನುತಮ ಪಾಲಿಸದೆ ಅಥವಾ ವೇಗದ ಚಾಲನೆಯಿಂದಾಗಿ ಅಪಘಾತ ಸಂಭವಿಸಿ ಸಾವಿಗೀಡಾಗುವ ಮೃತರ ಸಂಖ್ಯೆಯೇ ಹೆಚ್ಚು. ಇದೀಗ ಈ ಭೀಕರ ಅಪಘಾತವೊಂದು ಇಬ್ಬರು ಪುಟ್ಟ ಮಕ್ಕಳನ್ನು ಬಲಿ ತೆಗೆದುಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. 

 

ಕೆಎಸ್ಆರ್ ಟಿಸಿ ಬಸ್ ಗೆ ಢಿಕ್ಕಿ ಹೊಡೆದ ಕಾರು..!! ಇಬ್ಬರು ಮಕ್ಕಳು ಸ್ಪಾಟ್ ಡೆತ್...!!

 

ಸರ್ಕಾರಿ ಬಸ್ ಮತ್ತು ಕಾರು ಮುಖಾಮುಖಿ ಢಿಕ್ಕಿಯಾದ ಪರಿಣಾಮ ಇಬ್ಬರು ಮಕ್ಕಳು ದುರ್ಮರಣ ಹೊಂದಿ ಇನ್ನುಳಿದ ಐವರು ಗಂಭೀರವಾಗಿ ಗಾಯಗೊಂಡಿರುವ ಮನ ಕಲಕುವ ಘಟನೆ ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಪಡನ್ನಕ್ಕಾಡ್ ಎಂಬಲ್ಲಿ ನಡೆದಿದೆ.

 

ನೀಲೇಶ್ವರ ಕಣಿಚ್ಚರದ ರೆಹಮಾನ್ , ಲಹೆಕ್ ನಬಾ ಮೃತ ಮಕ್ಕಳಾಗಿದ್ದಾರೆ. ಝುಹರಾ, ಶೆರಿನ್, ಕಾರು ಚಾಲಕ ಫಾಯಿಝ್, ಬಸ್ ಪ್ರಯಾಣಿಕರಾದ ಸೂರ್ಯ, ಅನಿಲ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರ ಪೈಕಿ ಇಬ್ಬರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

 

ಈ ಭೀಕರ ಅಪಘಾತ ನಡೆದದ್ದು ಹೇಗೆ...? 

 

ಕಣ್ಣೂರು ಕಡೆಗೆ ತೆರಳುತ್ತಿದ್ದ ಕಾರು ಎದುರಿನಲ್ಲಿ ಬರುತ್ತಿದ್ದ ಕೆಎಸ್ಸಾಆರ್ ಟಿಸಿ ಬಸ್ ಗೆ ಢಿಕ್ಕಿ ಹೊಡೆದಿದೆ. ವೇಗದ ಚಾಲನೆಯಿಂದಾಗಿಯೇ ನಿಯಂತ್ರಣ ತಪ್ಪಿ ಈ ದುರ್ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

 

ಘಟನೆ ನಡೆದಾಗ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆ ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಆಗಮಿಸಿ ಕಾರಿನಲ್ಲಿದ್ದವರನ್ನು ಹೊರಕ್ಕೆ ತೆಗೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ಐವರನ್ನು ಕಾಞಂಗಾಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ಕೂಡಾ ದಾಖಲಾಗಿದೆ.