ಸಾರ್ವಜನಿಕರೇ ಬಿ ಅಲರ್ಟ್...!! ಸೈಬರ್ ಕ್ರಿಮಿಗಳ ವಂಚನೆಗೊಳಗಾದ್ರೆ ಜಸ್ಟ್ ಈ ನಂಬರ್ ಗೆ ಕಾಲ್ ಮಾಡಿ...!!

  • 31 Dec 2024 02:29:57 PM

ಇತ್ತೀಚಿನ ದಿನಗಳಲ್ಲಿ ಜನರು ಸುಲಭದ ದಾರಿಯಲ್ಲಿ ಹಣ ಮಾಡುವ ಉಪಾಯವನ್ನು ಯೋಚಿಸುತ್ತಲೇ ಇರುತ್ತಾರೆ. ಇದಕ್ಕಾಗಿ ಅದೆಷ್ಟೋ ತಪ್ಪು ದಾರಿಗಳನ್ನು ಹಿಡಿಯುತ್ತಾರೆ. ಅದರಲ್ಲಿ ಸೈಬರ್ ಕ್ರೈಮ್ ಪ್ರಕರಣವೂ ಒಂದು. ಆನ್ಲೈನ್ ಮುಖೇನ ಜನರನ್ನು ಮೋಸದ ಬಲೆಗೆ ಸಿಕ್ಕಿಸಿ ಹಣ ದೋಚುವ ಕುಕೃತ್ಯಗಳಿಗೆ ವಂಚಕರು ಸರಿಯಾಗಿ ಪ್ಲ್ಯಾನ್ ಮಾಡಿ ಆ ಮುಖೇನ ಹಣ ಕಸಿದುಕೊಳ್ಳುತ್ತಾರೆ. ಆದರೆ ಇನ್ಮುಂದೆ ಇಂತಹ ಮೋಸಕ್ಕೆ ಒಳಗಾಗದಂತೆ ಹೊಸ ಟ್ರಿಕ್ಸ್ ಒಂದನ್ನು ತಿಳಿಸಿಕೊಡಲಾಗುತ್ತಿದೆ. ಈ ಬಗ್ಗೆ ಸ್ವತಃ ಸೈಬರ್ ಕ್ರೈಂ ಪೊಲೀಸ್ ಆಯುಕ್ತರೇ ಮಾಹಿತಿಯನ್ನು ನೀಡಿದ್ದಾರೆ. 

 

ಸೈಬರ್ ವಂಚನೆಗೆ ಯಾರು ಒಳಗಾದ್ರೂ ಜಸ್ಟ್ ಈ ನಂಬರ್ ಗೆ ಕಾಲ್ ಮಾಡಿ ಸಾಕು...!!

 

ಸೈಬರ್ ಕ್ರೈಮ್ ಗೆ ಯಾರೇ ಒಳಗಾದರೂ ಧೃತಿಗೆಡದೆ ಕೂಡಲೇ 1039 ಈ ನಂಬರಿಗೆ ದೂರು ನೀಡಬೇಕು. ಇದರಿಂದ ಈ ಕರೆ ಎಲ್ಲಿಂದ ಬಂತು, ಯಾರು ಮಾಡಿದ್ದಾರೆ ಎಂದು ಪರಿಶೀಲನೆ ನಡೆಸಬಹುದು. ನಿಮ್ಮನ್ನು ನೀವು ಬಚಾವು ಮಾಡಿಕೊಳ್ಳಬಹುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸಲಹೆ ಸೂಚನೆಯನ್ನು ನೀಡಿದ್ದಾರೆ.

 

ಪತ್ರಿಕಾಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಅವರು ಡಿಜಿಟಲ್ ಅರೆಸ್ಟ್, ವಾಟ್ಸಾಪ್ ನಲ್ಲಿ ಸ್ಕ್ಯಾಮ್ ಅಥವಾ ಯಾವುದೇ ಇನ್ನಿತರ ಸೈಬರ್ ವಂಚನೆಗೆ ಒಳಗಾದರೆ, ಅಥವಾ ಅಂತಹ ಕರೆ ಸ್ವೀಕರಿಸಿದರೆ ಕೂಡಲೇ ಅದನ್ನು ಸ್ಥಗಿತಗೊಳಿಸಿ ಸ್ಥಳೀಯ ಪೊಲೀಸರಿಗೆ ಅಥವಾ ಸೈಬರ್ ಪೊಲೀಸರಿಗೆ ಕೂಡಲೇ ಮಾಹಿತಿಯನ್ನು ನೀಡಬೇಕು. ಒಂದು ವೇಳೆ ಅಂತಹ ಅಪರಿಚಿತ ಕರೆಯನ್ನು ನಂಬಿ ಸ್ವೀಕರಿಸಿ ವಂಚಕರ ಅಕೌಂಟ್ ಗೆ ಹಣ ಹಾಕಿದ್ದರೆ ಕೂಡಲೇ 1039 ನಂಬರಿಗೆ ಕರೆ ಮಾಡಿ. ಆಗ ಆ ಖಾತೆಯನ್ನೇ ಸ್ಥಗಿತಗೊಳಿಸಲಾಗುತ್ತದೆ ಎಂದು ಹೇಳಿದರು. 

 

ಯಾವುದೇ ಪೊಲೀಸರು ಕಾಲ್ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿದ್ದೇವೆಂದು ಹೇಳೋದಿಲ್ಲ- ಆಯುಕ್ತರು...

 

ಸಾರ್ವಜನಿಕರು ಯಾವುದೇ ರೀತಿಯ ಸೈಬರ್ ಕ್ರೈಮ್ ನಲ್ಲಿ ಸಿಲುಕಿಕೊಂಡರೆ ಇದೇ ನಂಬರನ್ನು ಸಂಪರ್ಕಿಸುವಂತೆ ಆಯುಕ್ತರು ಮನವಿ ಮಾಡಿದ್ದಾರೆ. ಇನ್ನು ಮುಖ್ಯವಾದ ವಿಚಾರವೇನೆಂದರೆ ಡಿಜಿಟಲ್ ಅರೆಸ್ಟ್ ಮಾಡಿದ್ದೇವೆ ಎಂದು ಯಾವುದೇ ಅಧಿಕೃತ ಪೊಲೀಸರು, ಸಿಬಿಐ, ಸಿಐಡಿ, ಇಡಿ ಅಧಿಕಾರಿಗಳು ದೂರವಾಣಿ ಕರೆಯ ಮೂಲಕ ತಿಳಿಸುವುದಿಲ್ಲ.

 

ಇದನ್ನು ಅದೆಷ್ಟು ಬಾರಿ ಸ್ಪಷ್ಟಪಡಿಸಿದ್ದರೂ ವಿದ್ಯಾವಂತರೇ ಈ ಮೋಸದ ಜಾಲಕ್ಕೆ ಬೀಳುತ್ತಾರೆ. ಈ ಬಗ್ಗೆ ಸಾರ್ವಜನಿಕರು ಅಲರ್ಟ್ ಆಗಿರಬೇಕು ಎಂದು ತಿಳಿ ಹೇಳಿದರು.