ಬಿಜೆಪಿ ಪಕ್ಷದ ಯಂಗ್ ಅಂಡ್ ಎನರ್ಜಿಟಿಕ್ ಸಂಸದ ತೇಜಸ್ವಿ ಸೂರ್ಯ ಅವರಿಗೆ ಮದುವೆ ಭಾಗ್ಯ ಒಲಿದು ಬಂದಿದೆ. ಬ್ಯಾಚುಲರ್ ಸಂಸದ ಎನಿಸಿಕೊಂಡಿದ್ದ ಸೂರ್ಯ ಅವರು 2025ರ ಮಾರ್ಚ್ 4ರಂದು ಚೆನ್ನೈ ಮೂಲದ ಖ್ಯಾತ ಗಾಯಕಿ,ಯೂಟ್ಯೂಬರ್ ಸಿವಶ್ರೀ ಅವರನ್ನು ವಿವಾಹವಾಗಲಿದ್ದಾರೆ.
ಹಾಗಿದ್ರೆ ಬೆಂಗಳೂರು ದಕ್ಷಣ ಸಂಸದ ತೇಜಸ್ವಿ ಸೂರ್ಯ ಕೈಹಿಡಿಯಲಿರುವ ವಧು ಯಾರು? ಅನ್ನುವ ಪ್ರಶ್ನೆ ನಿಮ್ಮಲ್ಲಿದ್ರೆ ಈ ವರದಿ ಓದಿ.
ಎಲ್ಲರ ಪ್ರಶ್ನೆಗೆ ಕೊನೆಗೂ ಉತ್ತರ ನೀಡಿದ ಸೂರ್ಯ!
ರಾಜಕಾರಣಿಯಾಗಿ ಯೂತ್ ಐಕಾನ್ ಎನಿಸಿಕೊಂಡಿರುವ ತೇಜಸ್ವಿ ಸೂರ್ಯ ಅವರಿಗೆ ಹೋದಲ್ಲೆಲ್ಲ 'ಮದುವೆ ಯಾವಾಗ?' ಅನ್ನುವ ಪ್ರಶ್ನೆಯೇ ಕಿವಿಗೆ ಬೀಳುತ್ತಿತ್ತು. ಆದರೆ ಯಾವತ್ತೂ ಕೂಡ ಸೂರ್ಯ ತಮ್ಮ ಮದುವೆಯ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಆದರೆ ಇದೀಗ ತಮ್ಮ ಮದುವೆಯ ಹಾಗೂ ಮದುವೆಯಾಗಲಿರುವ ಹುಡುಗಿಯ ಬಗ್ಗೆ ಸುದ್ದಿ ಬಹಿರಂಗ ಪಡಿಸಿದ್ದಾರೆ.
ಸೂರ್ಯ ಕೈಹಿಡಿಯುವ ಹುಡುಗಿ ಯಾರು?
ತೇಜಸ್ವಿ ಸೂರ್ಯ ಅವರು ತಮಿಳುನಾಡು ಮೂಲದ ಸ್ಕಂದ ಪ್ರಸಾದ್ ಅವರ ಪುತ್ರಿ ಸಿವಶ್ರೀ ಅವರನ್ನು ವಿವಾಹವಾಗಲಿದ್ದಾರೆ. ಸಿವಶ್ರೀ ಅವರು ಶಾಸ್ತ್ರೀಯ ಸಂಗೀತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯಾಗಿದ್ದಾರೆ.
ಶಾಸ್ತ್ರ ವಿಶ್ವವಿದ್ಯಾಲಯದಲ್ಲಿ ಬಯೋ ಎಂಜಿನಿಯರಿಂಗ್ ವಿಷಯದಲ್ಲಿ ಬಿಟೆಕ್ ಮಾಡಿರುವ ಸಿವಶ್ರೀ ಭರತನಾಟ್ಯ ಹಾಗೂ ಸಂಸ್ಕೃತದಲ್ಲಿ ಎಂ.ಎ ಮಾಡಿದ್ದಾರೆ. ಇದರೊಂದಿಗೆ ಸೈಕ್ಲಿಂಗ್, ಮ್ಯಾರಥಾನ್ ಹಾಗೂ ವಾಕಥಾನ್ ಗಳಲ್ಲೂ ಆಸಕ್ತಿ ಹೊಂದಿದ್ದಾರೆ.
ಮೋದಿ ಮೆಚ್ಚಿದ ಗಾಯಕಿ ಸಿವಶ್ರೀ!
ಇದಿಷ್ಟೇ ಅಲ್ಲದೇ ಸಿವಶ್ರೀ ಖ್ಯಾತ ಯೂಟ್ಯೂಬರ್ ಕೂಡ ಹೌದು. ಇವರ ಯೂಟ್ಯೂಬ್ ಚಾನೆಲ್‌ಗೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಇದ್ದಾರೆ. ಕಳೆದ ಜನವರಿಯ ರಾಮನವಮಿ ಸಂಧರ್ಭದಲ್ಲಿ ಇವರು ಹಾಡಿ, ಯೂಟ್ಯೂಬ್‌ಗೆ ಅಪ್ಲೋಡ್ ಮಾಡಿದ 'ಪೂಜಿಸಲೆಂದೇ ಹೂಗಳ ತಂದೆ' ಹಾಡನ್ನು ಪ್ರಧಾನಿ ನರೇಂದ್ರ ಮೋದಿ ಮೆಚ್ಚಿಕೊಂಡಿದ್ದರು. ಒಟ್ಟಾರೆಯಾಗಿ ಸಿವಶ್ರೀ ಅವರು ಸಂಸದ ತೇಜಸ್ವಿ ಸೂರ್ಯ ಅವರ ಅರ್ಹತೆಗೆ ತಕ್ಕ ಹುಡುಗಿ ಎನ್ನುವುದರಲ್ಲಿ ಅನುಮಾನವಿಲ್ಲ.