ಬಂಟ್ವಾಳ| 2 ಹಿಂದೂ-ಮುಸ್ಲಿಂ ತಂಡಗಳ ನಡುವೆ ಹೊಡೆದಾಟ! ಮತ್ತೆ ಕೋಮುಕ್ರೋಧ ???!

  • 31 Dec 2024 04:59:53 PM

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕೋಮುದಳ್ಳುರಿ ಪ್ರತಿಧ್ವನಿಸಿದೆ‌. ಜಿಲ್ಲೆಯ ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ಎರಡು ಹಿಂದೂ-ಮುಸ್ಲಿಂ ಯುವಕರ ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು,ದೂರು,

 

ಪ್ರತಿದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಸ್.ಪಿ ಭೇಟಿ ನೀಡಿದ್ದಾರೆ. ಈ ಬಗೆಗಿನ ವರದಿ ಇಲ್ಲಿದೆ.

 

ದೂರು ನಂ.1ರಲ್ಲಿ‌ ಏನಿದೆ?

 

ಡಿ.29ರ ಮಧ್ಯಾಹ್ನ ಬಡಗಬೆಳ್ಳೂರಿನಿಂದ ಮನೆಗೆ ಹೋಗುತ್ತಿದ್ದಾಗ ಕೋಳ್ತಮಜಲು ಸಮೀಪ ಪರಿಚಯಸ್ಥ ಉಮೇಶ್ ಎಂಬವರಿಗೆ ಕೆಲವರು ಹಲ್ಲೆ ನಡೆಸುತ್ತಿದ್ದದ್ದು ಕಂಡು ಬಂದಿದೆ.

 

ಈ ವೇಳೆ 'ಯಾಕೆ ಹೊಡೆಯುತ್ತಿದ್ದೀರಿ' ಎಂದು ಪ್ರಶ್ನಿಸಿದಾಗ ಆರೋಪಿಗಳಾದ ಮುಸ್ತಾ, ನವಾಜ್,

 

ರಜೀಮ್ ಹಾಗೂ ಇರರು ನನಗೂ ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ತೇಜಾಕ್ಷ ಎಂಬವರು ದೂರಿನಲ್ಲಿ ವಿವರ ನೀಡಿದ್ದಾರೆ.

 

ಪ್ರತಿ ದೂರಿನಲ್ಲಿ ಏನಿದೆ?

 

ಇದೇ ಪ್ರಕರಣದ ಬಗ್ಗೆ, 'ಡಿ.29ರಂದು ಮಧ್ಯಾಹ್ನ ಮದುವೆಗೆ ಹೋಗಲು‌ ಕೋಳ್ತಮಜಲಿನಲ್ಲಿ ನಿಂತಿದ್ದಾಗ ಉಮೇಶ ಎಂಬಾತ ನನ್ನ ಕಾಲರ್ ಹಿಡಿದು ಹಲ್ಲೆ ನಡೆಸಿದ್ದು ಮಾತ್ರವಲ್ಲದೇ,

 

ಹಣದ ವಿಚಾರವಾಗಿ ಕೊಲೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ತೇಜಾಕ್ಷ ಕೂಡ ಕೊಲೆ ಬೆದರಿಕೆ ಹಾಕಿದ್ದಾನೆ' ಎಂದು ಪ್ರತಿದೂರಿನಲ್ಲಿ ಪುತ್ತೂರಿನ ಪಲ್ಲಿಪಾಡಿ ನಿವಾಸಿ ಸುಲೈಮಾನ್ ದೂರು ನೀಡಿದ್ದಾನೆ.

 

ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಅವರು ಭೇಟಿ‌ ನೀಡಿ ಪರಿಶೀಲನೆ‌ ನಡೆಸಿದ್ದಾರೆ ಎನ್ನಲಾಗಿದೆ.