ಕುಂಬಳೆ ತಲೆಮರಿಸಿಕೊಂಡಿದ್ದ ನಯ ವಂಚಕಿ ಸಚಿತಾ ರೈ ಬಂಧನಕ್ಕಾಗಿ ನಡೆದ ಯುವ ಮೋರ್ಚಾದ ತೀವ್ರ ಹೋರಾಟ, ಎಚ್ಚರಗೊಂಡ ಕುಂಬಳೆ ಪೊಲೀಸರು

  • 25 Oct 2024 09:18:32 AM

ಕುಂಬಳೆ :ಯುವಮೋರ್ಚ್ ಕುಂಬಳೆ ಮಂಡಲ ಸಮಿತಿ ವತಿಯಿಂದ ಉದ್ಯೋಗ ಭರವಸೆ ನೀಡಿ ವಂಚಿಸಿದ ಡಿ ವೈ ಎಫ್ ಐ ನಾಯಕಿ *ಸಚಿತಾ ರೈ*ವಿರುದ್ಧ ಪ್ರಾಥಮಿಕ ಹಂತದ ತನಿಖೆಯಲ್ಲಿ ತಪ್ಪಿತಸ್ತೆ ಎಂದು ಕಂಡುಬಂದರೂ ಅವಳ ವಿರುದ್ಧ ಕಾನೂನು ಕ್ರಮಕೈಗೊಳ್ಳದ ರಾಜ್ಯ ಸರಕಾರ ಹಾಗೂ ಪೊಲೀಸ್ ಇಲಾಖೆಯ ವಿರುದ್ಧ ಕುಂಬಳೆ ಪೊಲೀಸ್ ಠಾಣೆಗೆ ಪ್ರತಿಭಟನೆ ನಡೆಸಲಾಯಿತು.

 

 

 

 ಪ್ರತಿಭಟನ ಕಾರ್ಯಕ್ರಮವನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ರವೀಶ್ ತಂತ್ರಿ ಕುಂಟಾರು ಉದ್ಘಾಟಿಸಿದರು.

ಯುವಮೋರ್ಚಾ ಕುಂಬ್ಳೆ ಮಂಡಲ ಅಧ್ಯಕ್ಷ ಅವಿನಾಶ್ ಕಾರಂತ್ ಅಧ್ಯಕ್ಷತೆ ವಹಿಸಿದರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಬಿಜೆಪಿ ಉತ್ತರ ವಲಯ ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಶೆಟ್ಟಿ, ರಾಜ್ಯ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಕುಮಾರ್ ಮಯ್ಯ, ಕೆಪಿ ಅನಿಲ್ ಕುಮಾರ್, ಜಿಲ್ಲಾ ಸಮೀತಿ ಸದಸ್ಯರಾದ ಬಾಬು ಕುಬನೂರ್, ಜಯಂತಿ ಶೆಟ್ಟಿ ನೇತಾರರಾದ ಸುಜಿತ್ ರೈ, ಸುಧಾಕರ್ ಕಾಮತ್, ಪ್ರೇಮಲತಾ ಗಟ್ಟಿ, ಮೋಹನ್,

 

ಹಿಂದೂ ಸಂಘಟನೆಯ ಪ್ರಮುಖರಾದ ಅಕ್ಷಯ್ ರಜಪೂತ್ ನೇತೃತ್ವ ನೀಡಿದರು.ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಸರಗೋಡು ಜಿಲ್ಲಾ, ಕುಂಬಳೆ ಬಿಜೆಪಿ, ಯುವ ಮೋರ್ಚಾ ಹಾಗೂ ಹಿಂದೂ ಸಂಘಟನೆಯ ನಾಯಕರ ವಿರುದ್ಧ ಕೇಸ್ ದಾಖಲಿಸಿಕೊಂಡ ಕುಂಬಳೆ ಪೊಲೀಸ್.