ಕಾಸರಗೋಡು| ಗಲ್ಲುಶಿಕ್ಷೆಗೆ ಗುರಿಯಾದ ಕೇರಳ ನರ್ಸ್ ನಿಮಿಷಪ್ರಿಯಾ!; ಅಷ್ಟಕ್ಕೂ ಈಕೆ ಮಾಡಿದ್ದೆಂತ ಅಪರಾಧ ಗೊತ್ತಾ?

  • 01 Jan 2025 12:25:19 PM

ಕಾಸರಗೋಡು: ದೂರದ ಯೆಮೆನ್ ದೇಶದಲ್ಲಿ ಕುಟುಂಬ ಸಮೇತ ವಾಸಿಸುತ್ತಿದ್ದ ಕೇರಳ ಮೂಲದ ನರ್ಸ್ ನಿಮಿಷಪ್ರಿಯಾ ಎಂಬ ಮಹಿಳೆಗೆ ಯೆಮೆನ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ‌. ಸದ್ಯ, ಈ ಪ್ರಕರಣ ದೇಶದಾದ್ಯಂತ ಸಾಕಷ್ಟು ಚರ್ಚೆಯಾಗುತ್ತಿದ್ದು, ಅಷ್ಟಕ್ಕೂ ನಿಮಿಷಪ್ರಿಯಾ ಮಾಡಿದ ಅಪರಾಧ ಏನು? ಈ ಬಗೆಗಿನ ಕಂಪ್ಲೀಟ್ ಡೀಟಿಯಲ್ಸ್ ಇಲ್ಲಿದೆ‌.

 

ಕೊಲೆ ಮಾಡಿ ದೇಹ ಕತ್ತರಿಸಿದ ನಿಮಿಷ!

 

2017ರಲ್ಲಿ ಯೆಮೆನ್ ನಲ್ಲಿದ್ದ ನಿಮಿಷ ಕ್ಲಿನಿಕ್ ಪ್ರಾರಂಭಿಸಲು ತಲಾಲ್ ಎಂಬ ಸ್ನೇಹಿತನ ಸಹಾಯ ಪಡೆದುಕೊಂಡಿದ್ದಳು. ಜೊತೆಗೆ ಕ್ಲಿನಿಕ್‌ನಿಂದ ಬರುವ ಆದಾಯದಲ್ಲಿ ಸಮಪಾಲು ಎಂಬ ಒಪ್ಪಂದವಾಗಿತ್ತು. ತಿಂಗಳ ಬಳಿಕ ತಲಾಲ್ ಆದಾಯದಲ್ಲಿ ಪಾಲು ಕೇಳಿದ್ದಾಗ ನಿಮಿಷ ತನ್ನ ಸ್ನೇಹಿತ ಹನಾನ್ ಜೊತೆಗೂಡಿ ತಲಾಲ್ ಗೆ ಚುಚ್ಚು ಮದ್ದು ನೀಡಿ ಕೊಲೆ ಮಾಡಿದ್ದಳು. ಬಳಿಕ ದೇಹವನ್ನು ಕತ್ತರಿಸಿ ನೀರಿನ ತೊಟ್ಟಿಯಲ್ಲಿ ಬಚ್ಚಿಟ್ಟಿದ್ದಳು.ಕೆಲ ದಿನಗಳ‌ ನಂತರ ಪ್ರಕರಣ ಬೆಳಕಿಗೆ ಬಂದು ನಿಮಿಷ ಬಂಧನವಾಗಿತ್ತು. 

 

2018ರಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್!

 

2018ರಲ್ಲಿ ಪ್ರಕರಣದ ವಿಚಾರಣೆ ನಡೆಸಿದ ಯೆಮೆನ್ ನ್ಯಾಯಾಲಯ ನಿಮಿಷಪ್ರಿಯಾಳಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಆತ್ಮ ರಕ್ಷೆಗಾಗಿ ಕೊಲೆ ಮಾಡಿದೆ ಎಂಬ ಅರ್ಜಿ ಸಲ್ಲಿಸಿದರೂ ಕೂಡ ನಿಮಿಷಾಳ ಅರ್ಜಿ ತಿರಸ್ಕೃತಗೊಂಡಿದ್ದು, ಮರಣದಂಡನೆಯಾಗುವುದು ಬಹುತೇಕ ಖಚಿತವಾಗಿದೆ‌.

 

ಇತ್ತೀಚೆಗಷ್ಟೇ ಕೋರಿಕೆಯ ಮೇರೆಗೆ ನಿಮಿಷಾಳ ತಾಯಿ ಪ್ರೇಮ ಕುಮಾರು ಅವರ ಭೇಟಿಗೆ ದಿಲ್ಲಿ ಹೈಕೋರ್ಟ್ ಅನುಮತಿ ನೀಡಿತ್ತು‌.