ನ್ಯೂ ಇಯರ್ ಪಾರ್ಟಿಗೆ ಗೋವಾ ಟ್ರಿಪ್..!! ಸಾಗುವ ದಾರಿ ಮಧ್ಯೆ ನಡೆಯಿತು ಘೋರ ದುರಂತ..!!

  • 01 Jan 2025 12:48:51 PM

ಹಾವೇರಿ: ಹೊಸ ವರ್ಷಾಚರಣೆ ಎಂದಿನಂತೆ ಬೆಂಗಳೂರು ಅಥವಾ ಇನ್ನಿತರ ಕಡೆ ಬಲು ಜೋರಾಗಿಯೇ ಇರುತ್ತದೆ. ಮೋಜು, ಪಾರ್ಟಿ, ಮಸ್ತಿ, ಫ್ರೆಂಡ್ಸ್ ಜೊತೆ ಎಂಜಾಯ್ ಮಾಡುತ್ತಾ ವರ್ಷದ ಮೊದಲ ದಿನವನ್ನು ಸ್ವಾಗತಿಸುತ್ತೇವೆ. ಆದರೆ ಈ ಸಂತೋಷದ ಸಂದರ್ಭದಲ್ಲಿ ದುರಂತವೊಂದು ನಡೆದುಬಿಟ್ಟರೆ ಹೇಗಾಗುತ್ತೆ ಹೇಳಿ. ಅದೇ ರೀತಿ ಇಲ್ಲೊಂದು ನಡೆದ ಘಟನೆ ಕೇಳಿದ್ರೆ ಬೇಜಾರಾಗೋದು ಖಂಡಿತ. 

 

ನ್ಯೂ ಇಯರ್ ಪಾರ್ಟಿಗೆ ಗೋವಾಕ್ಕೆ ಹೋಗುತ್ತಿದ್ದಾಗ ನಡೆದೇ ಹೋಯ್ತು ದುರಂತ..!!

 

ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಮತ್ತೊಂದು ಕಾರು ಢಿಕ್ಕಿ ಹೊಡೆದು ನಾಲ್ವರು ಗಂಭೀರವಾಗಿ ಗಾಯಗೊಂಡು, ಆರು ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಛತ್ರ ಗ್ರಾಮದ ಬಳಿ ನಡೆದಿದೆ. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಈ ದುರಂತ ಘಟನೆಯೊಂದು ಸಂಭವಿಸಿದೆ. ನ್ಯೂ ಇಯರ್ ಪಾರ್ಟಿ ಮಾಡಲೆಂದು ಗೋವಾಗೆ ತೆರಳುತ್ತಿದ್ದ ಆಂಧ್ರ ಮೂಲದ ಯುವಕರ ತಂಡ ಪ್ರಯಾಣ ಮಾಡುತ್ತಿದ್ದ ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆ. 

 

ಜ್ವಾಲಿ ಮೂಡ್ ನಲ್ಲಿದ್ದ ಯುವಕರಿಗೆ ಬಿಗ್ ಶಾಕ್ ಕೊಟ್ಟ ಭೀಕರ ಅಪಘಾತ..!

 

ಹೊಸ ವರ್ಷಾಚರಣೆಯ ಗಮ್ಮತ್ತಿನಲ್ಲಿದ್ದ ಯುವಕರಿಗೆ ಭೀಕರ ಅಪಘಾತ ಸಿಡಿಲು ಬಡಿದಂತಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ದಾವಣಗೆರೆ ಮೂಲದ ತೇಜಸ್ (25), ಸಂದೇಶ್ (25), ದೀಪಕ್ (25) ಮತ್ತು ವೆಂಕಟೇಶ್ (26) ಎಂದು ಗುರುತಿಸಲಾಗಿದೆ. ವೀರೇಶ್ (23), ಲಕ್ಷ್ಮಣ (23), ಅಶೋಕ್‌ (24), ಗೌಡನಬಿ (24), ಸಾಗರ್ (26) ಮತ್ತು ಸಂಕೇತ್‌ (36) ಎಂದು ಗುರುತಿಸಲಾಗಿದೆ. ಇವರಲ್ಲಿ ನಾಲ್ವರನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬ್ಯಾಡಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

 

ಒಟ್ಟಿನಲ್ಲಿ ನಾವು ಯಾವುದೇ ಆಚರಣೆ, ಮೋಜು- ಮಸ್ತಿಯಲ್ಲಿ ಮುಳುಗಿದ್ದರೂ ಜೀವದ ಬಗ್ಗೆ, ವಾಹನ ಚಲಾಯಿಸುವಾಗ ವಹಿಸಬೇಕಾದ ಜಾಗ್ರತಾ ಕ್ರಮಗಳ ಬಗ್ಗೆ ಎಚ್ಚರವಹಿಸಲೇಬೇಕು. ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಅಂತಾನೇ ಹೇಳಬಹುದು.