ಹೆತ್ತ ತಾಯಿಯನ್ನೇ ಮದುವೆಯಾದ 18 ವರ್ಷದ ಮಗ ಅಬ್ದುಲ್ ಅಹ್ಮದ್!;ಈ ಮದುವೆಗೆ ಈತ ಕೊಟ್ಟ ಕಾರಣವೇನು ಗೊತ್ತಾ?

  • 01 Jan 2025 01:02:06 PM

ಪಾಕಿಸ್ತಾನ: ನೆಂಟರಿಷ್ಟರನ್ನ ಬಿಟ್ಟು ರಕ್ತ ಸಂಬಂಧಿಕರನ್ನು ಮದುವೆಯಾದ ಘಟನೆಗಳನ್ನು ನೀವು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ಹೆತ್ತ ತಾಯಿಯನ್ನೇ ಮದುವೆಯಾದ ವಿಲಕ್ಷಣ ಘಟನೆಯನ್ನು ಎಂದಾದರೂ ಕಂಡಿದ್ದೀರಾ?. ಆಶ್ಚರ್ಯ ಎನಿಸಿದರು ಇದು ಸತ್ಯ. ಅಬ್ದುಲ್ ಅಹ್ಮದ್ ಎನ್ನುವ 18 ವರ್ಷದ ಯುವಕನೊಬ್ಬ ತನ್ನ ಹೆತ್ತ ತಾಯಿಯನ್ನೇ ಮದುವೆಯಾಗಿದ್ದಾನೆ. ಜೊತೆಗೆ ಈತ ಈ ಮದುವೆ ಒಂದು ಕಾರಣವನ್ನು ಕೂಡ ಸಾಮಾಜಿಕ‌ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈ‌ ಇಂಟ್ರೆಸ್ಟಿಂಗ್ ಘಟನೆಯ ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ.

 

ಮಗ ಕೊಟ್ಟ ಕಾರಣವೇನು?

 

ಈ ಘಟನೆ ನಡೆದಿರುವುದು ನೆರೆಯ ಪಾಕಿಸ್ತಾನದಲ್ಲಿ. ಇಲ್ಲಿನ 18 ವರ್ಷದ ಯುವಕ ಅಬ್ದುಲ್ ಅಹ್ಮದ್ ತನ್ನ ತಾಯಿಯನ್ನು ಇತ್ತೀಚೆಗಷ್ಟೇ ಮದುವೆಯಾಗಿದ್ದಾನೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ, 'ನನ್ನ ತಾಯಿ ನನ್ನ ಹಾಗೂ ತಂಗಿಯ ಏಳಿಗೆಗಾಗಿ ಇಡೀ ಜೀವನವನ್ನು ಮುಡಿಪಾಗಿರಿಸಿದ್ದಾರೆ.ಆದರೆ ಬಲು‌ ಬೇಗ ಅವರು ಗಂಡನನ್ನು ಕಳೆದುಕೊಂಡರು‌. ದೈಹಿಕ ಸುಖಕ್ಕಾಗಿ ಅಲ್ಲ ತಾಯಿಯ ನೆಮ್ಮದಿಯ ಜೀವನಕ್ಕಾಗಿ ಇದೀಗ ನಾನು ತಾಯಿಯನ್ನೇ ಮದುವೆಯಾಗುದ್ದೇನೆ' ಎಂದು ತನ್ನ ತಾಯಿಯೊಂದಿಗಿನ ಮದುವೆಗೆ ಕಾರಣ ತಿಳಿಸಿದ್ದಾನೆ‌.

 

ಮೊದಲು ಮದುವೆಗೆ ಒಪ್ಪದ ತಾಯಿ!

 

ಅಬ್ದುಲ್ ಅಹಮ್ಮದ್ ಮೊದಲಿಗೆ ಈ ವಿಚಾರವನ್ನು ತಾಯಿಯೊಂದಿಗೆ ಪ್ರಸ್ತಾಪ ಮಾಡಿದಾಗ ಇದಕ್ಕೆ ತಾಯಿ ಒಪ್ಪಿರಲಿಲ್ಲ‌. ಬಳಿಕ ತಾಯಿಯ ಮನವೊಲಿಸಿದ ಅಬ್ದುಲ್ ಆಕೆಯನ್ನು ಮದುವೆಗೆ ಒಪ್ಪಿಸಿದ್ದಾನೆ. ತಾಯಿಗೆ ಬೇರೆಯವರೊಂದಿಗೆ ವಿವಾಹ ಮಾಡಿದರೆ ಅವರು ಚೆನ್ನಾಗಿ ನೋಡಿಕೊಳ್ಳುತ್ತಾರೋ, ಇಲ್ಲವೋ ಎಂಬ ಅನುಮಾನದಿಂದ ಅಬ್ದುಲ್ ಇದೀಗ ಸ್ವತಃ ತಾನು ತಾಯಿಯನ್ನು ವಿವಾಹವಾಗಿದ್ದಾನೆ ಎಂದು ತಿಳಿದು ಬಂದಿದೆ‌. ಒಟ್ಟಾರೆಯಾಗಿ ಈ ವಿಲಕ್ಷಣ ಮದುವೆಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.