ತಾಳಿಪಾಡಿ: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ತಾಳಿಪಾಡಿ ಗ್ರಾಮದ ಪದ್ಮನೂರು ಶೆಟ್ಟಿಕಾಡು ಎಂಬಲ್ಲಿ 2022ರ ಜೂನ್ 23ರಂದು ಸಂಜೆ ಸುಮಾರು 5.15ರ ಸುಮಾರಿಗೆ, ಹಿತೇಶ್ ತನ್ನ ಮಕ್ಕಳಾದ ರಶ್ಮಿತಾ (14), ಉದಯಕುಮಾರ್ (11), ಮತ್ತು ದಕ್ಷಿತ್ (4) ಅವರನ್ನು ಮನೆಯ ಬಳಿ ಇರುವ ಅಶೋಕ್ ಶೆಟ್ಟಿಗಾರ್ ಎಂಬವರ ಬಾವಿಗೆ ಎಸೆದು ಹತ್ಯೆ ಮಾಡಿದ್ದ. ಸಂಜೆಯ ವೇಳೆ, ಪತ್ನಿ ಲಕ್ಷ್ಮೀ ಮನೆಗೆ ಬಂದು ಮಕ್ಕಳನ್ನು ಕೇಳಿದಾಗ, ಹಿತೇಶ್ ಅವರು ಬಾವಿಯ ಬಳಿ ಆಟವಾಡುತ್ತಿದ್ದಾರೆ ಎಂದು ಸುಳ್ಳು ಹೇಳಿ ಬಾವಿಯ ಬಳಿ ಹೋದ ಪತ್ನಿಯನ್ನು ಸಹ ಹಿತೇಶ್ ಬಾವಿಗೆ ದೂಡಿ ಕೊಲ್ಲಲು ಪ್ರಯತ್ನಿಸಿದ ಘಟನೆ ನಡೆದಿತ್ತು
ಆ ಪ್ರಕರಣದ ಹಿನ್ನೆಲೆಯಲ್ಲಿ ನ್ಯಾಯಾಲಯವು ಸಾಕ್ಷಾಧಾರ ಮತ್ತು ದಾಖಲೆಗಳನ್ನು ಪರಿಗಣಿಸಿ ಡಿ.30ರಂದು ಮಕ್ಕಳ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಎನ್ನು ಪತ್ನಿಯನ್ನು ಕೊಲ್ಲಲು ಯತ್ನಿಸಿದ್ದಕ್ಕೆ 10 ವರ್ಷಗಳ ಜೈಲು ತೀರ್ಪುನ್ನು ಪ್ರಕಟಿಸಿತು. ಜೊತೆಗೆ ಮಕ್ಕಳ ತಾಯಿ ಲಕ್ಷ್ಮೀಗೆ ಸೂಕ್ತ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಆದೇಶ ನೀಡಿದೆ.
ಮುಲ್ಕಿ ಠಾಣೆಯ ನಿರೀಕ್ಷಕ ಕುಸುಮಾಧರ್ ಕೆ. ಅವರು ತನಿಖೆ ಪೂರ್ಣಗೊಳಿಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 32 ಸಾಕ್ಷಿದಾರರ ಹೇಳಿಕೆಗಳನ್ನು ಆಧರಿಸಿ, ನ್ಯಾಯಾಧೀಶರು ಅಭಿಯೋಜಕ ಮೋಹನ್ ಕುಮಾರ್ ಬಿ. ಅವರ ವಾದವನ್ನು ಅಂಗೀಕರಿಸಿದರು.