ತುಮಕೂರು:ರಾಜ್ಯ ಹಾಗೂ ಪೊಲೀಸ್ ಇಲಾಖೆಯ ಮಾನ, ಮರ್ಯಾದೆಯನ್ನು ಡಿವೈಎಸ್ಪಿ ಯೊಬ್ಬ ಮೂರು ಕಾಸಿಗೆ ಹರಾಜು ಹಾಕಿದ ಘಟನೆಯೊಂದು ಗೃಹ ಸಚಿವ ಪರಮೇಶ್ವರ್ ಅವರ ತವರು ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ದೂರು ನೀಡಲು ಬಂದ ಮಹಿಳೆಯೊಂದಿಗೆ ತುಮಕೂರು ಜಿಲ್ಲೆಯ ಮಧುಗಿರಿ ಪೊಲೀಸ್ ಠಾಣೆಯ ಡಿವೈಎಸ್ಪಿ ಬಲವಂತದ ಸೆಕ್ಸ್ ನಡೆಸಿದ್ದು, ಈ ಬಗೆಗಿನ ರಾಸಲೀಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಘಟನೆಯ ವಿವರ!
ಜಮೀನು ವ್ಯಾಜ್ಯದ ಬಗ್ಗೆ ಮಹಿಳೆಯೊಬ್ಬರು ಮಧುಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಬಗ್ಗೆ ಮಾತನಾಡಲು ಮಹಿಳೆಯನ್ನು ತನ್ನ ಕಚೇರಿಗೆ ಕರೆಸಿಕೊಂಡ ಡಿವೈಎಸ್ಪಿ ರಾಮಚಂದ್ರಪ್ಪ,'ಪ್ರಕರಣ ನಿಮ್ಮ ಪರವಾಗಿ ಇತ್ಯರ್ಥವಾಗಬೇಕಿದ್ದರೆ ನನ್ನೊಂದಿಗೆ ಸಹಕರಿಸಬೇಕು' ಎಂದು ಮಹಿಳೆಯೊಂದಿಗೆ ಹೇಳಿ, ಬಳಿಕ ಆಕೆಯನ್ನು ಶೌಚಾಲಯದ ಬಳಿ ಕರೆದುಕೊಂಡು ಹೋಗಿ ಒತ್ತಾಯದ ಲೈಂಗಿಕ ಕ್ರಿಯೆ ನಡೆಸಿದ್ದಾನೆ.ಈ ಘಟನೆಯನ್ನು ಯಾರೋ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
ಗೃಹ ಸಚಿವರ ತವರಿನಲ್ಲೇ ಘಟನೆ!
ಪೊಲೀಸ್ ಇಲಾಖೆಯ ಸರ್ವೋಚ್ಚ ಅಧಿಕಾರಿ ಎನಿಸಿಕೊಂಡಿರುವ ಗೃಹ ಸಚಿವ ಪರಮೇಶ್ವರ ಅವರ ತವರು ಜಿಲ್ಲೆಯಲ್ಲೇ ಈ ಅಮಾನವೀಯ ಘಟನೆ ಬೆಳಕಿಗೆ ಬಂದಿದ್ದು,ರಾಮಚಂದ್ರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ತುಮಕೂರು ಎಸ್ಪಿ ಕೆ.ವಿ ಅಶೋಕ್, 'ಡಿವೈಎಸ್ಪಿ ರಾಮಚಂದ್ರಪ್ಪ ಮಹಿಳೆಯೊಂದಿಗೆ ಆಕ್ಷೇಪಾರ್ಹವಾಗಿ ನಡೆದುಕೊಂಡಿರುವುದು ಸಾಬೀತಾಗುದೆ ಆದಷ್ಟು ಬೇಗ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು' ಎಂದು ತಿಳಿಸಿದ್ದಾರೆ.