ಪುತ್ತೂರು| ಕುಂಬ್ರದ ಬಾಡಿಗೆ ರೂಂಗೆ ಕರೆದು ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ ಕಾಮುಕ!;ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್,ಆರೋಪಿ ಅರೆಸ್ಟ್!

  • 03 Jan 2025 03:06:35 PM

ಪುತ್ತೂರು: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಲ್ಲದೇ ಆಕೆಯನ್ನು ಹಲವು ಬಾರಿ ಕುಂಬ್ರದ ತನ್ನ ಬಾಡಿಗೆ ರೂಂಗೆ ಕರೆದೊಯ್ದು ಅತ್ಯಾಚಾರ ನಡೆಸಿದ ಮತ್ತು ಖಾಸಗಿ ಕ್ಷಣಗಳನ್ನು ವಿಡಿಯೋ ಮಾಡಿ ಆಕೆಗೆ ಬ್ಲಾಕ್ ಮೇಲೆ ಮಾಡಿದ ಕಾಮುಕ ಪ್ರವೀಣ್ ಪೂಜಾರಿ ಸದ್ಯ, ಅರೆಸ್ಟ್ ಆಗಿದ್ದಾನೆ‌. ಅಪ್ರಾಪ್ತ ಬಾಲಕಿ ಗರ್ಭಿಣಿಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ಪುತ್ತೂರಿನಲ್ಲಿ ಈ ಘಟನೆ ಸಂಚಲನ ಸೃಷ್ಟಿಸಿದೆ.

 

ನಿರಂತರ ಅತ್ಯಾಚಾರ,ಗರ್ಭಿಣಿಯಾದ ಬಾಲಕಿ!

 

ಆರೋಪಿ ಪ್ರವೀಣ್ ಪೂಜಾರಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ತನ್ನ ಬಾಡಿಗೆ ರೂಂಗೆ ಕರೆದೊಯ್ದು ದೈಹಿಕ ಸಂಪರ್ಕ ಬೆಳೆಸಿದ್ದಾನೆ.

 

ಜೊತೆಗೆ ಇದನ್ನು ವಿಡಿಯೋ ಮಾಡಿ ಆಕೆಯನ್ನು ಹಲವು ಬಾರಿ ಬಳಸಿಕೊಂಡಿದ್ದಾನೆ.ಅಂತಿಮವಾಗಿ ಬಾಲಕಿ ಗರ್ಭಿಣಿಯಾಗಿದ್ದು, ಡಿ.30 ರಂದು ಗರ್ಭಪಾತವಾಗಲು ಈತ ಮಾತ್ರೆ ತಂದು ಕೊಟ್ಟಿದ್ದಾನೆ. ಜೊತೆಗೆ ಅದೇ ದಿನ‌ ಆಕೆಯನ್ನು ಮತ್ತೆ ತನ್ನ ಬಾಡಿಗೆ ರೂಂಗೆ ಕರೆಸಿಕೊಂಡಿದ್ದಾನೆ.

 

ದೂರು ನೀಡಿದ ಬಾಲಕಿ, ಆರೋಪಿ ಅರೆಸ್ಟ್!

 

ಡಿ.31 ರಂದು ರಾತ್ರಿ ಪೂರ್ತಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಈ ಕಾಮುಕ ಬಾಲಕಿ ಮದುವೆಯ ವಿಚಾರ ತೆಗೆದಾಗ ಆಕೆಯ ಮೇಲೆ ಹಲ್ಲೆ ನಡೆಸಿ, ಕೊಲೆ‌ ಬೆದರಿಕೆ ಹಾಕಿದ್ದಾನೆ‌. ಜೊತೆಗೆ ಆಕೆಯನ್ನು ಪರಂಗಿ ಪೇಟೆಯಲ್ಲಿ ಬಿಟ್ಟು ತೆರಳಿದ್ದಾನೆ.

 

ಇದರಿಂದ ಮನನೊಂದ ಬಾಲಕಿ ಮನೆಯವರಿಗೆ ವಿಚಾರ ತಿಳಿಸಿದ್ದು, ಸದ್ಯ ಆರೋಪಿ ಪ್ರವೀಣ್ ಪೂಜಾರಿಯ ಮೇಲೆ ಅಟ್ರಾಸಿಟಿ ಕೇಸ್ ದಾಖಲಿಸಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.