ಪೋಲಿಸರನ್ನೇ ಹನಿಟ್ರ್ಯಾಪ್ ಖೆಡ್ಡಾಕ್ಕೆ ಕೆಡವಿದ ಕಿಲಾಡಿ ಲೇಡಿ!;ಪೊಲೀಸರಿಂದ ಈಕೆ ವಸೂಲಿ ಮಾಡಿದ ಹಣವೆಷ್ಟು ಗೊತ್ತಾ?

  • 04 Jan 2025 07:45:14 AM

ಕಲಬುರಗಿ:ಹಣದ ಆಸೆಯಿಂದಾಗಿ ಜನರು ಅನೇಕ ಅಕ್ರಮ ದಾರಿಗಳನ್ನು ಹುಡುಕುತ್ತಿರುತ್ತಾರೆ. ಮುಗ್ಧರನ್ನು ಮೋಸದ ಜಾಲಕ್ಕೆ ಸಿಲುಕಿಸಿ ಹಣ ಲೂಟಿ ಮಾಡುತ್ತಿರುತ್ತಾರೆ. ಹನಿಟ್ರ್ಯಾಪ್ ಪ್ರಕರಣಗಳ ಬಗ್ಗೆ ನೀವು ಕೇಳಿರಬಹುದು. ಸಾಮಾನ್ಯವಾಗಿ ಶ್ರೀಮಂತ ಉದ್ಯಮಿಗಳು, ರಾಜಕಾರಣಿಗಳು ಇಂತಹ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

 

ಆದರೆ ಇಲ್ಲೊಬ್ಬ ಖತರ್ನಾಕ್ ಲೇಡಿ ಪೊಲೀಸರನ್ನೇ ಮೋಸದ ಬಲೆಗೆ ಬೀಳಿಸಿಕೊಂಡಿದ್ದಾಳೆ. 

 

ಪೊಲೀಸನ ಪತ್ನಿಯಿಂದ 8 ಲಕ್ಷ ರೂ. ವಸೂಲು..!

 

ಹೌದು. ಈ ಹನಿಟ್ರ್ಯಾಪ್ ಅನ್ನುವಂತದ್ದು ನಾವು ಹೇಗೆ ಮೋಸದ ಜಾಲೆಗೆ ಸಿಲುಕಿಕೊಳ್ಳುತ್ತೇವೆ ಎಂಬುವುದೇ ಅರಿವಿಗೆ ಬರುವುದಿಲ್ಲ.‌ ಆದರೆ ಮತ್ತೆ ನಮ್ಮ ಘನತೆ, ಗೌರವ, ಮರ್ಯಾದೆಗೆ ಹೆದರಿ ಆಚೆ ಬದುಕಲೂ ಆಗದೆ, ಈಚೆ ಸಾಯಲೂ ಆಗದೆ ಒದ್ದಾಡುತ್ತೇವೆ.

 

ಇದೇ ಪರಿಸ್ಥಿತಿ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರಿಗೆ ಎದುರಾದದ್ದು. ಪೂಜಾ ಡೊಂಗರಗಾಂವ್ ಎಂಬವ ಚಾಲಾಕಿ ಮಹಿಳೆ ಕಲಬುರಗಿ ಸೆನ್ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಓರ್ವರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿಕೊಂಡಿದ್ದಾಳೆ.‌ ಆ ಬಳಿಕ ಕಾನ್ಸ್‌ಟೇಬಲ್ ಪತ್ನಿಯಿಂದ ಎಂಟು ಲಕ್ಷ ರೂ. ಹಣವನ್ನು ವಸೂಲಿ ಮಾಡಿದ್ದಾಳೆ. 

 

ಪೂಜಾಳ ಕಿರಿಕಿರಿಗೆ ಬೇಸತ್ತು ಜೀವಾಂತ್ಯಗೊಳಿಸಲು ನಿರ್ಧರಿಸಿದ ಪೊಲೀಸ್ ಸಿಬ್ಬಂದಿ ಪತ್ನಿ...!!

 

ಆರೋಪಿ ಪೂಜಾಳ ಕಿರಿಕಿರಿಗೆ ಬೇಸತ್ತು ಕಾನ್ಸ್‌ಟೇಬಲ್ ಪತ್ನಿ ನೊಂದು ಬೆಂದಿದ್ದಳು. ಪೂಜಾ ಮತ್ತು ಅಮರ್ ಸಿಂಗ್ ಈ ಇಬ್ಬರು ಖದೀಮರು 15 ಲಕ್ಷಕ್ಕೆ ಬೇಡಿಕೆ ಇಟ್ಟು 8 ಲಕ್ಷ ಹಣವನ್ನು ವಸೂಲಿ ಮಾಡಿದ್ದಳು.

 

ಇವರ ಕಾಟಕ್ಕೆ ಮನ ನೊಂದು ಆತ್ಮಹತ್ಯೆಗೆ ಶರಣಾಗಲು ಕಾನ್ಸ್‌ಟೇಬಲ್ ಪತ್ನಿ ನಿರ್ಧರಿಸಿದ್ದಳು. ಇದೀಗ ಈ ಕಿಲಾಡಿ ಮಹಿಳೆಯ ಮೋಸದ ಜಾಲವನ್ನು ಪೊಲೀಸರು ಬೇಧಿಸಿದ್ದು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.